×
Ad

ಭಟ್ಕಳ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಯ ಬಂಧನ

Update: 2017-03-06 16:08 IST

ಭಟ್ಕಳ, ಮಾ.6:  ಇತ್ತೀಚೆಗೆ ಭಟ್ಕಳದ ಖಾಸಗಿ ಶಾಲೆಯೊಂದರ ಪ್ರಾಂಶುಪಾಲ, ಶಿಕ್ಷಕ ಹಾಗೂ ಕಾರು ಚಾಲಕ ಮೂವರು ಸೇರಿ ಎಸೆಸ್ಸೆಲ್ಸಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಹಸಿ ಇರುವಾಗಲೇ ರವಿವಾರ ಮತ್ತೊಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಓರ್ವನನ್ನು ಬಂಧಿಸಿರುವ ನಗರಠಾಣೆಯ ಪೋಲಿಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  ಬಂಧಿತನನ್ನು ಗುಳ್ಮಿಯ ಮುಹಮ್ಮದ್ ಅಲ್ತಾಫ್ ಅರ್ಮಾರ್ ಎಂದು ಗುರುತಿಸಲಾಗಿದೆ. 

ಈತನು ಚೌಥನಿಯ ಮುಖ್ಯ ರಸ್ತೆಯ ಅಪ್ರಾಪ್ತ ಬಾಲಕಿಯೋರ್ವಳನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಪುಸಲಾಯಿಸಿ ಎಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಕಾರಿನಲ್ಲಿ ಮುರುಡೇಶ್ವರಕ್ಕೆ ಕರೆದೊಯ್ದು ಅಲ್ಲಿನ ವಸತಿ ಗೃಹವೊಂದರಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂದು ಬಾಲಕಿಯ ತಾಯಿ ನಗರ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನನ್ವಯ ಪ್ರಕರಣವನ್ನು ದಾಖಲಿಸಿಕೊಂಡ ನಗರ ಠಾಣೆಯ ಪಿಎಸೈ ಎಚ್.ಬಿ.ಕುಡಕುಂಟಿ ಆರೋಪಿಯನ್ನು ಬಂಧಿಸಿ  ಕಾರವಾರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News