ಪುತ್ತೂರು: ಸಂಟ್ಯಾರ್‌ನಲ್ಲಿ ಗುಡ್ಡಕ್ಕೆ ಬೆಂಕಿ
Update: 2017-03-06 19:30 IST
ಪುತ್ತೂರು, ಮಾ.6: ಮಾಣಿ- ಮೈಸೂರು ರಾ. ಹೆದ್ದಾರಿಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರ್ ಕಲ್ಲರ್ಪೆ ಬಳಿ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡಿದ್ದು ಭಾಗಶ ಬೆಂಕಿಗೆ ಆಹುತಿಯಾಗಿದೆ.
ಬೋರ್‌ವೆಲ್ ಲಾರಿಯೊಂದು ರಸ್ತೆಯಲ್ಲಿ ತೆರಳುವ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಗೊಂಡು ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ರಸ್ತೆ ಪಕ್ಕದ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡಿದ್ದು ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಪುತ್ತೂರು ಅಗ್ನಿ ಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕಳೆದ ವರ್ಷವೂ ಇದೇ ಸ್ಥಳದಲ್ಲಿ ಗುಡ್ಡ ಬೆಂಕಿಗಾಹುತಿಯಾಗಿತ್ತು.