'ಕಲೆಯಿಂದ ಸಮುದಾಯಿಕ ಸಮೃದ್ಧಿ ಸಾಧ್ಯ'
ಉಡುಪಿ, ಮಾ.6: ವ್ಯಕ್ತಿ ಸಮೂಹದಲ್ಲಿ ಒಂದಲ್ಲಾ ಒಂದು ರೀತಿಯ ಕಲಾ ಶತ್ತಿ ಅಡಗಿರುತ್ತದೆ. ಇದು ವೃತ್ತಿ ಮತ್ತು ಪ್ರವೃತ್ತಿಯನ್ನು ಸರಿದೂಗಿಸಿ ಕೊಂಡು ಸಾಗುವ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತದೆ. ಶ್ರೇಷ್ಠತೆಯ ಪರಿಪಾಕವಾದ ಕಲೆಯೊಡನೆ ಒಳ್ಳೆಯ ಸಂಬಂಧವಿರಿಸಿದಾಗ ಜನಸಮು ದಾಯದ ಮನೆ-ಮನ ಸಮೃದ್ಧಿ ಸಾಧ್ಯವಾಗುತ್ತದೆ ಎಂದು ನಿವೃತ್ತ ಪ್ರಾಂಶು ಪಾಲ ಸಂಜೀವ ಟಿ.ಕರ್ಕೇರ ಅಭಿಪ್ರಾಯ ಪಟ್ಟಿದ್ದಾರೆ.
ಸುಮನಸಾ ಕೊಡವೂರು ಸಂಸ್ಥೆಯ ವತಿಯಿಂದ ಅಜ್ಜರಕಾಡು ಭುಜಂಗ ಪಾರ್ಕಿನ ಬಯಲು ರಂಗವಂದಿರದಲ್ಲಿ ರವಿವಾರ ನಡೆದ 'ರಂಗಹಬ್ಬ-5' ರ ಎರಡನೇ ದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ರವಿ ಪೂಜಾರಿ, ಸದಾನಂದ ಕೋಟ್ಯಾನ್ ಕೊಡವೂರು, ನಾಗರಾಜ ಸುವರ್ಣ ಕೊಡವೂರು, ಕೊಡ ವೂರು ಕೆನರಾ ಬ್ಯಾಂಕಿನ ಪ್ರಬಂಧಕ ಪಿ.ಶಿವಾನಂದ, ಮಲ್ಪೆ ಶ್ರೀನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ದಿನೇಶ್ ಸುವರ್ಣ, ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಂ.ಜಿ.ಎಂ. ಕಾಲೇಜಿನ ನಿವೃತ್ತ ಗುಮಸ್ತ ಅಬ್ದುಲ್ ಸಾಹೇಬ್ ಅವರನ್ನು ಸನ್ಮಾನಿಸಲಾಯಿತು. ಚಂದ್ರಕಾಂತ್ ಕಲ್ಮಾಡಿ ಸ್ವಾಗತಿಸಿ ದರು. ರಾಜ್‌ಗೋಪಾಲ್ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೀವನ್ ಕುಮಾರ್ ವಂದಿಸಿದರು. ಪ್ರವೀಣ್ ಚಂದ್ರ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು.