×
Ad

ಉಡುಪಿ: ಡಾ.ರಾಮಚಂದ್ರಗೆ ಪ್ರಶಸ್ತಿ ಪ್ರದಾನ

Update: 2017-03-06 20:58 IST

ಉಡುಪಿ, ಮಾ.6: ಇಂಡಿಯನ್ ಅಸೋಸಿಯೇಶನ್ ಫಾರ್ ದಿ ಸ್ಟಡಿ ಆಫ್ ಟ್ರಡಿಷನಲ್ ಏಷ್ಯನ್ ಮೆಡಿಸಿನ್ ಇಂಡಿಯಾ ವತಿಯಿಂದ ವಾರ ಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಕೆ.ಎನ್.ಉಡುಪ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕುತ್ಪಾಡಿ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ನಿವೃತ್ತ ಪ್ರಾಂಶುಪಾಲ ಹಾಗೂ ಶಲ್ಯತಂತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಆರ್.ರಾಮಚಂದ್ರ ಅವರಿಗೆ ಱರಾಜ ವೈದ್ಯ ಹರಿಭಾಹು ಪರಾಂಜಪೆೞ ಪ್ರಶಸ್ತಿ ಪ್ರದಾನ ಮಾಡಲಾಯಿತು.

37 ವರ್ಷಗಳ ಕಾಲ ಶಿಕ್ಷಕರಾಗಿದ್ದ ಇವರು, ಶಲ್ಯತಂತ್ರ ವಿಭಾಗದಲ್ಲಿ ಕೈ ಕೊಂಡ ಸಂಶೋಧನೆ, ಚಿಕಿತ್ಸಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು.

ಅಧ್ಯಕ್ಷತೆಯನ್ನು ಛತ್ತಿಸ್‌ಗಡ್‌ನ ಮಾಜಿ ರಾಜ್ಯ ಪಾಲ ಶೇಕರ್ ಸೂದ್ ವಹಿಸಿದ್ದರು. ಡಾ.ಅನಿಲ್ ಕೆ.ತ್ರಿಪಾಟಿ, ಡಾ.ವಿ.ಕೆ. ಶುಕ್ಲಾ, ಡಾ.ನರೇಂದ್ರ ಭಟ್, ಡಾ.ಮನೋರಂಜನ್ ಸಾಹು, ಡಾ. ರಾಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News