×
Ad

ಮಾ.7ರಂದು ' ಹುಖೂಖುಲ್ ಇಬಾದ್-ಮನುಕುಲದ ಸೇವೆ'ಯ ಬಗ್ಗೆ ಸ್ನೇಹ ಸಮ್ಮಿಲನ

Update: 2017-03-06 21:20 IST

ಮಂಗಳೂರು, ಮಾ.6: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಸುನ್ನಿ ಜಂ-ಇಯ್ಯತುಲ್ ಮುಅಲ್ಲಿಮೀನ್ ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಕಾಪು ಹಾಗೂ ಕಣ್ಣಂಗಾರ್ ರೇಂಜ್‌ಗಳ ಖತೀಬರು, ಮದ್ರಸ ಅದ್ಯಾಪಕರು ಮತ್ತು ಮದ್ರಸ ಮ್ಯಾನೇಜ್‌ಮೆಂಟ್‌ನ ಪದಾಧಿಕಾರಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಮಾ.7ರಂದು ಬೆಳಗ್ಗೆ 9:30ಕ್ಕೆ ಮೂಳೂರಿನ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನಲ್ಲಿ ನಡೆಯಲಿದೆ.

  ಕಾರ್ಯಕ್ರಮದಲ್ಲಿ ಱಹುಖೂಖುಲ್ ಇಬಾದ್-ಮನುಕುಲದ ಸೇವೆೞ ಎಂಬ ವಿಷಯದಲ್ಲಿ ಕೆ.ಸಿ.ಎಫ್ ನ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್.ಪಿ ಹಂಝ ಸಖಾಫಿ ಹಾಗೂ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ಹಾಜಿ ರಫೀಕ್ ಮಾಸ್ಟರ್ ತರಗತಿ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News