×
Ad

'ಚಾಪ್ಟರ್‌' ತುಳು ಸಿನಿಮಾದ ಧ್ವನಿ ಸುರುಳಿ ಬಿಡುಗಡೆ

Update: 2017-03-06 22:30 IST

ಮಂಗಳೂರು, ಮಾ.6: ರಾಜ್ಯದಲ್ಲಿನ ಕನ್ನಡ ಸಿನಿಮಾಗಳ ಜೊತೆಗೆ ಕರಾವಳಿಯ ತುಳು ಸಿನಿಮಾಗಳು ಅಭಿವೃದ್ಧಿಯಾಗಲಿ ಎಂದು ಶಾಸಕ ಮೊಯ್ದಿನ್ ಬಾವಾ ಹೇಳಿದರು.
 
ನಗರದ ಫೋರಂ ಫಿಝಾ ಮಾಲ್‌ನಲ್ಲಿ ನಡೆದ ಎಲ್. ಪ್ರೊಡಕ್ಷನ್ ಲಾಂಛನದಲ್ಲಿ ಮೋಹನ್ ಭಟ್ಕಳ್ ನಿರ್ದೇಶನದ 'ಚಾಪ್ಟರ್‌'ತುಳು ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಸಂದರ್ಭ ಅವರು ಮಾತಾನಾಡಿದರು.

ನಿರ್ದೇಶಕ ಮೋಹನ್ ಭಟ್ಕಳ್, ಸಿನಿಮಾದ ನಾಯಕ ಅಸ್ತಿಕ್ ಶೆಟ್ಟಿ, ನಾಯಕಿ ಐಶ್ವರ್ಯ ಹೆಗ್ಡೆ, ತುಳು ಸಿನಿಮಾಗಳ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮೇಯರ್ ಹರಿನಾಥ್, ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವರಾಜ್, ಬಿಜೆಪಿ ಮುಖಂಡ ರವೀಂದ್ರ ಶೆಟ್ಟಿ, ಉಮೇಶ್ ಮಿಜಾರ್, ಅರವಿಂದ್ ಬೋಳಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News