ನಗದು ವ್ಯವಹಾರದ ಶುಲ್ಕ ಹಿಂಪಡೆಯಬೇಕು: ಸಮೀಕ್ಷೆ

Update: 2017-03-07 09:27 GMT

ಹೊಸದಿಲ್ಲಿ,ಮಾ.7: ನಗದುವ್ಯವಹಾರಕ್ಕೆ ಬ್ಯಾಂಕುಗಳು ವಿಧಿಸಲಿರುವ ಶುಲ್ಕವನ್ನು ಹಿಂಪಡೆಯಬೇಕೆಂದು ಠೇವಣಿದಾರರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಖಾತೆದಾರರಲ್ಲಿ ಲೋಕಲ್ ಸರ್ಕಿಲ್ಸ್ ನಡೆಸಿದ ಸಮೀಕ್ಷೆಯಲ್ಲಿ ಶೇ.70ರಷ್ಟು ಮಂದಿ ಬ್ಯಾಂಕುಗಳು ಕ್ರಮವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ನಗದುರಹಿತ ಆರ್ಥಿಕ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಪ್ರಯುಕ್ತ ಬ್ಯಾಂಕುಗಳ ಈ ತೀರ್ಮಾನ ಸರಿಯಲ್ಲ ಎಂದು ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ. 11,081 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.

ಹಣಕಾಸು ವ್ಯವಹಾರದ ಖರ್ಚು ಕಡಿಮೆ ಮಾಡಲು ಬ್ಯಾಂಕುಗಳ ಕ್ರಮ ಸಹಕಾರಿ ಎಂದು ಕೇವಲ ಶೇ.14ರಷ್ಟು ಮಂದಿ ಹೇಳಿದ್ದಾರೆ.ಬ್ಯಾಂಕುಗಳ ಕ್ರಮವನ್ನು ಬೆಂಬಲಿಸುವುದಿಲ್ಲ ಎಂದು ಶೇ.56ರಷ್ಟು ಮಂದಿ ಹೇಳಿದ್ದಾರೆ.

ರಿಸರ್ವ್‌ಬ್ಯಾಂಕ್ ಮಧ್ಯಪ್ರವೇಶಿಸಿ ಕೂಡಲೇ ಶುಲ್ಕವನ್ನು ಹಿಂಪಡೆಯಬೇಕೆಂದು ಇವರು ಆಗ್ರಹಿಸಿದ್ದಾರೆ. ಅದೇ ವೇಳೆ ತಿಂಗಳಲ್ಲಿ ನಾಲ್ಕು ವ್ಯವಹಾರ ಉಚಿತವಾಗಿ ನಡೆಯುವುದರಿಂದ ಶೇ. 26ರಷ್ಟು ಮಂದಿ ತೃಪ್ತಿ ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News