ಸಚಿವ ಎಚ್ .ಸಿ ಮಹದೇವಪ್ಪರಿಂದ ಬಂದರು ಕಾಮಗಾರಿ ಪರೀಶೀಲನೆ
Update: 2017-03-07 15:04 IST
ಮಂಗಳೂರು, ಮಾ.7: ಹಳೆ ಬಂದರುವಿನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸಚಿವ ಎಚ್ .ಸಿ. ಮಹದೇವಪ್ಪ ಬೋಟ್ ನಲ್ಲಿ ತೆರಳಿ ಕಾಮಗಾರಿಯನ್ನು ಇಂದು ಪರಿಶೀಲಿಸಿದರು.
ಒಂದು ಗಂಟೆಗಳ ಕಾಲ ಬೋಟ್ ನಲ್ಲಿ ಸುತ್ತಾಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಸಚಿವರು ಎಡಿಬಿ ಮೊದಲ ಹಂತದ ಕಾಮಗಾರಿ ಮೇ 2018ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದ್ದು, 220 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ನಡೆಯಲಿದೆ. 2ನೆ ಹಂತದ ಕಾಮಗಾರಿ 2020ಕ್ಕೆ ಪೂರ್ಣಗೊಳ್ಳಲಿದ್ದು, 650 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್.ಲೊಬೋ ಮತ್ತಿತರರು ಉಪಸ್ಥಿತರಿದ್ದರು.