ಬೆಲೆಯೇರಿಕೆ ತಡೆಯಲು ವಿದೇಶದಿಂದ ಅಕ್ಕಿ ತರಿಸಿಕೊಳ್ಳಲಾಗುವುದು : ಪಿಣರಾಯಿ
ತಿರುವನಂತಪುರಂ,ಮಾ.7: ಅಕ್ಕಿಗೆ ಬೆಲೆಯೇರಿಕೆಯಾದ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಹೊರದೇಶಗಳಿಂದ ಅಕ್ಕಿಯನ್ನುತರಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿವಿಜಯನ್ ಹೇಳಿದ್ದಾರೆ.
ಎಲ್ಲ ಪಂಚಾಯತ್‌ಗಳಲ್ಲಿ ಮಾವೇಲಿ ಸ್ಟೋರ್‌ಗಳನ್ನು ತೆರೆಯಲಾಗುವುದು. ಸಹಕಾರಿ ಅಕ್ಕಿಯಂಗಡಿ ರಾಜ್ಯಮಟ್ಟದ ಉದ್ಘಾಟನೆ ನಿರ್ವಹಿಸಿ ಅವರು ಮಾತಾಡುತ್ತಿದ್ದರು.ಅಕ್ಕಿಬೆಲೆ ತಕ್ಷಣ ಕಡಿಮೆಯಾಗಲಿದೆ ಎಂದ ಮುಖ್ಯಮಂತ್ರಿ ಬೆಲೆಹೆಚ್ಚಿಸುವ ಸಂಚನ್ನು ವಿಫಲಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಷ್ಟು ಅಕ್ಕಿಯನ್ನು ತಲುಪಿಸಲಾಗುವುದು. ಎಡಪಕ್ಷ ಸರಕಾರ ಇಂತಹ ಸವಾಲುಗಳನ್ನು ಈ ಹಿಂದೆಯೂ ಯಶಸ್ವಿಯಾಗಿ ನಿಭಾಯಿಸಿದೆ ಎಂದುಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಜಯ ಅಕ್ಕಿಗೆ ಸಾರ್ವಜನಿಕ ಮಾರುಕಟ್ಟೆಯಲ್ಲಿ ಕೆಲವೇ ದಿವಸಗಳಲ್ಲಿ 10ರಿಂದ 15 ರೂಪಾಯಿ ವರೆಗೆ ಏರಿಕೆಯಾಗಿದೆ. ಈಗ ಅದರ ಬೆಲೆ ಐವತ್ತು ರೂಪಾಯಿಯನ್ನೂ ದಾಟಿದೆ. ಜಯ ಅಕ್ಕಿಯನ್ನು ಸಣ್ಣ ವ್ಯಾಪಾರಿಗಳಿಂದ ಖರೀದಿಸಿದರೆ ಬೆಲೆ ಅದಕ್ಕಿಂತಲೂ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ವರದಿಯಾಗಿದೆ.