ಬೆಳುವಾಯಿ ಶ್ರೀ ಯಕ್ಷದೇವ ವಿಂಶತಿ ಕಲೋತ್ಸವ
Update: 2017-03-07 15:39 IST
ಮೂಡುಬಿದಿರೆ, ಮಾ.7: ಬೆಳುವಾಯಿ ಶ್ರೀ ಯಕ್ಷದೇವ ವಿಂಶತಿ ಕಲೋತ್ಸವದ 6ನೆ ಕಾರ್ಯಕ್ರಮ ಸಾಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೇಂದಬೆಟ್ಟುವಿನಲ್ಲಿ ಜರಗಿತು. ದಿ ಸಂಜೀವ ಸಮಗಾರ ಸಾಣೂರು ಇವರ ಸಂಸ್ಮರಣೆಯನ್ನು ಕಲಾ ಸಂಘಟಕ ಸಾಣೂರು ಮೋಹನ್‌ದಾಸ್ ಪ್ರಭು ನೆರವೇರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಯಕ್ಷಗಾನ ಕಲಾವಿದ ಗುರು ಶಿವರಾಮ್ ಭಟ್ ನೆರವೇರಿಸಿದರು. ಕಲಾವಿದರಾದ ಶ್ರೀ ಕೃಷ್ಣ ಶೆಟ್ಟಿಗಾರ್ ಸಾಣೂರು ಇವರಿಗೆ ಗೌರವ ಸನ್ಮಾನ ನೀಡಿ ಪುರಸ್ಕರಿಸಲಾಯಿತು. ನಿವೃತ್ತ ಪ್ರಾಂಶುಪಾಲ ಪದ್ಮನಾಭ ಗೌಡ ಅಧ್ಯಕ್ಷತೆ ವಹಿಸಿದ್ದರು. ವೇ ಮೂ. ಶ್ರೀರಾಮ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಎಂ.ದೇವಾನಂದ ಭಟ್ ಸ್ವಾಗತಿಸಿದರು. ಕಲಾವಿದ ಸಾಣೂರು ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಕನ್ಯಾಡಿ ವಂದನಾರ್ಪಣೆಗೈದರು.