×
Ad

ಲಕ್ನೋದಲ್ಲಿ ಶಂಕಿತ ಉಗ್ರನಿಂದ ಗುಂಡಿನ ದಾಳಿ

Update: 2017-03-07 17:53 IST

 ಲಕ್ನೋ, ಮಾ.7: ನಗರದ ಠಾಕೂರ್‌ಗಂಜ್ ನಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತಿರುವ ಶಂಕಿತ ಉಗ್ರನಿಗಾಗಿ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್) ಕಾರ್ಯಾಚರಣೆ ಆರಂಭಿಸಿದ್ದು, ಶಂಕಿತ ಉಗ್ರ ಮತ್ತು ಎಟಿಎಸ್ ನಡುವೆ ಗುಂಡಿನ ಕಾಳಗ ನಡೆಯುತ್ತಿದೆ.

ಮಧ್ಯಪ್ರದೇಶದಲ್ಲಿ ಬೆಳಗ್ಗೆ ನಡೆದ ರೈಲು ಸ್ಫೋಟ ಪ್ರಕರಣದಲ್ಲಿ ಶಂಕಿತ ಉಗ್ರ  ಭಾಗಿಯಾಗಿರುವ ಬಗ್ಗೆ ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ.

ಶಂಕಿತ ಉಗ್ರ ಮತ್ತು ಎಟಿಎಸ್ ನಡುವೆ ಗುಂಡಿನ ಚಕಮಕಿ ನಡೆಯುತ್ತಿರುವುದನ್ನು ರಾಜ್ಯ ಪೊಲೀಸ್ ಆಯುಕ್ತ ಜಾವೇದ್ ಅಹ್ಮದ್ ದೃಢಪಡಿಸಿದ್ದಾರೆ.

20 ಕಮಾಂಡೊಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ರಾಜ್ಯದ ಹೊರಗಿನಿಂದ ಬಂದಿರುವ ಶಂಕಿತ ಉಗ್ರ ಶರಣಾಗಲು ನಿರಾಕರಿಸಿ ಎಟಿಎಸ್‌ನೊಂದಿಗೆ ಗುಂಡಿನ ಚಕಮಕಿಯಲ್ಲಿ ತೊಡಗಿದ್ದಾನೆ. ಇದೇ ಸಂದರ್ಭದಲ್ಲಿ ಕಾನ್ಪುರದಲ್ಲಿ ಶಂಕಿತ ಉಗ್ರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News