ಭಾರತೀಯ ಕಲಾ ಹಿರಿಮೆ ಅವಿಚ್ಛಿನ್ನವಾದುದು: ಆಸ್ಕರ್ ಫೆರ್ನಾಂಡೀಸ್
ಉಡುಪಿ, ಮಾ.7: ಅಭಿವ್ಯಕ್ತತೆಯ ವೈಶಿಷ್ಟತೆಗಳಿದ್ದವರನ್ನು ಸ್ವೀಕಾರಾರ್ಹ ರನ್ನಾಗಿಸುವ ಸತ್ವ ಕಲಾ ಪ್ರಕಾರಗಳಿಗಿದೆ. ಇದು ಹಳ್ಳಿ, ನಗರವೆನ್ನದೆ ಎಲ್ಲೂ ಸಲ್ಲುತ್ತಿರುವುದು ಸಾಬೀತಾಗಿದೆ ಮತ್ತು ಸ್ವ ಅನುಭವವೂ ಆಗಿದೆ. ಭಾರತೀ ಯರ ಸಾಂಸ್ಕೃತಿಕ, ಕಲಾ ಹಿರಿಮೆ ಅವಿಚ್ಛಿನ್ನವಾದುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದ್ದಾರೆ.
ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗ ಪಾರ್ಕಿನ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ 'ರಂಗಹಬ್ಬ-5' ರ ಮೂರನೇ ದಿನವಾದ ಸೋಮವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಕಿಶನ್ ಹಗ್ಡೆ ಕೊಳ್ಕೆಬೈಲು ವಹಿಸಿದ್ದರು. ಬ್ಲ್ಲೊಸಂ ಆಸ್ಕರ್ ಫೆರ್ನಾಂಡೀಸ್, ರಾಜ್ಯ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗೂರ್, ಶಿಕ್ಷಕ ಜಿ.ಪಿ. ಪ್ರಭಾಕರ ತುಮುರಿ, ಬಿಲ್ಲವ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ, ಉದ್ಯಮಿ ಹರೀಶ್ ಜಿ.ಕೋಟ್ಯಾನ್, ಲೋಕನಾಥ್ ಕುಂದರ್, ಕಲಾವಿದ ರಾಮ್ ಶೆಟ್ಟಿ ಹಾರಾಡಿ ಹಾಗೂ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ರಂಗಕಲಾವಿದ ಬಿ.ಕೆ.ಕಾರಂತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಗೇಶ್ ಪ್ರಸಾದ್ ಸ್ವಾಗತಿಸಿದರು. ಯೋಗೀಶ್ ಕೊಳಲಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ್ ಅಮ್ಮಂಜೆ ವಂದಿಸಿದರು.
ಎಂ.ಎಸ್.ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಸರಂಗ ಕದ್ರಿಕಟ್ಟು ಕೋಟ ಅವರಿಂದ ಕಲೆಯ ಕೊಲೆ ನಾಟಕ ಪ್ರದರ್ಶನಗೊಂಡಿತು.