ಉಡುಪಿ: ನ್ಯೂಸ್ ಕನ್ನಡದ 2ನೆ ವರ್ಷಾಚರಣೆ 'ಅರೋಮಾ'
ಉಡುಪಿ, ಮಾ.7: ನ್ಯೂಸ್‌ಕನ್ನಡ ಡಾಟ್ ಇನ್ ಆನ್‌ಲೈನ್ ಮಾಧ್ಯಮದ ಎರಡನೇ ವರ್ಷಾಚರಣೆ ಸಂಭ್ರಮ 'ಅರೋಮಾ' ಮೇ7ರಂದು ಸಂಜೆ 5 ಗಂಟೆಗೆ ಮಲ್ಪೆ ಬೀಚ್‌ನಲ್ಲಿ ಜರಗಲಿದೆ.
ಸಮಾರಂಭದಲ್ಲಿ ದ.ಕ. ಜಿಲ್ಲೆಯ ಹುತಾತ್ಮ ಸೈನಿಕ ಏಕನಾಥ ಶೆಟ್ಟಿ ಹಾಗೂ ಯೋಧ ಪ್ರವೀಣ್ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಸಹಾಯಕರ ಧ್ವನಿಯಾಗಿರುವ ಶಂಕರಪುರದ ವಿಶ್ವಾಸದಮನೆ, ಸ್ನೇಹದೀಪ, ಕೊಕ್ಕಡ ಎಂಡೋಸಲ್ಫಾನ್ ಪಾಲನಾ ಕೇಂದ್ರಕ್ಕೆ ತಲಾ ಐದು ಲಕ್ಷ ರೂ. ನೆರವು ನೀಡಲಾಗುವುದು ಎಂದು ನ್ಯೂಸ್‌ಕನ್ನಡದ ಮುಖ್ಯಕಾರ್ಯನಿರ್ವಹಣಾ ಧಿಕಾರಿ ಮುಖ್ತಾರ್ ಉಚ್ಚಿಲ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪೃಥ್ವಿ ಅಂಬರ್, ಸಲೀಂ ಜಾವೇದ್, ಅಹ್ಮದ್ ಮಿಖ್ದಾದ್, ಗಣೇಶ್ ನಾಯಕ್, ರುಮಾನ ಫರ್ಹೀನ್, ಅವಿನಾಶ್ ಕಾಮತ್, ಸಿರಾಜ್ ಎರ್ಮಾಳ್ ಅವರಿಗೆ 'ಯುವ ಉಡುಪಿ ನಕ್ಷತ್ರ ಪ್ರಶಸ್ತಿ' ಪ್ರದಾನ ಮಾಡ ಲಾಗುವುದು. ಮುಖ್ಯ ಅತಿಥಿಗಳಾಗಿ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಸಚಿವರಾದ ಪ್ರಮೋದ್ ಮಧ್ವರಾಜ್, ಯು.ಟಿ.ಖಾದರ್ ಮೊದಲಾದವರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಪು ಲೀಲಾಧರ ಶೆಟ್ಟಿ, ಪ್ರಧಾನ ಸಂಪಾದಕ ಗಣೇಶ್ ಕೆ.ಪಿ., ರಾಹುಲ್ ಸುವರ್ಣ ಉಪಸ್ಥಿತರಿದ್ದರು.