×
Ad

ಉಡುಪಿ: 'ಎಂಪವರ್‌' ಕಾರ್ಯಕ್ರಮ

Update: 2017-03-07 20:56 IST

ಉಡುಪಿ, ಮಾ.7: ಮಹಿಳಾ ಉದ್ಯಮಿಗಳ ವೇದಿಕೆ ಱಪವರ್‌ೞಸಂಸ್ಥೆಯ ವತಿಯಿಂದ ಮಣಿಪಾಲ ಮಹಿಳಾ ಸಮಾಜ ಮತ್ತು ಉಡುಪಿ ಇನ್ನರ್ ವ್ಹೀಲ್ ಕ್ಲಬ್‌ನ ಸಹಯೋಗದೊಂದಿಗೆ ವಾರ್ಷಿಕ ಹಾಗೂ ಮಹಿಳಾ ದಿನಾ ಚರಣೆ 'ಎಂಪವರ್‌' ಕಾರ್ಯಕ್ರಮ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಮಂಗಳವಾರ ಜರಗಿತು.

ಸಾಮಾಜಿಕ ಕಾರ್ಯಕರ್ತೆ ವರೋನಿಕಾ ಕರ್ನೆಲಿಯೋ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪವರ್ ಸಂಸ್ಥೆಯ ನೂತನ ಅಧ್ಯಕ್ಷೆ ಡಾ.ಗಾಯತ್ರಿ ಹಾಗೂ ಕಾರ್ಯದರ್ಶಿ ಡಾ.ಸ್ಮಿತಾ ರಜನೀಸ್ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಲಾಯಿತು.

ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಅರುಣಾ ಶೆಣೈ, ಕಾರ್ಯದರ್ಶಿ ಸರೋಜಾ ಆಚಾರ್ಯ, ಇನ್ನರ್‌ವೀಲ್ ಅಧ್ಯಕ್ಷೆ ಸರಸ್ವತಿ ಕಾಮತ್, ಕಾರ್ಯ ದರ್ಶಿ ಸಪ್ನಾ ಸುರೇಶ್, ಪವರ್ ಸಂಸ್ಥಾಪಕ ಅಧ್ಯಕ್ಷೆ ರೇಣು ಜಯರಾಮ್, ಮಾಜಿ ಅಧ್ಯಕ್ಷರಾದ ಸಾಧನಾ ಮಲ್ಯ, ದಿವ್ಯರಾಣಿ ಪ್ರದೀಪ್ ಮೊದಲಾದ ವರು ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷೆ ಸರಿತಾ ಸಂತೋಷ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಶ್ರುತಿ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಕೋಶಾಧಿಕಾರಿ ನಿವೇದಿತಾ ಶೆಟ್ಟಿ ವಂದಿಸಿದರು. ಡಾ.ಮಂಜರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News