ಕೊಣಾಜೆ: ಉಚಿತ ರಕ್ತ ಮತ್ತು ಸ್ಥೂಲಕಾಯ ತಪಾಸನ ಶಿಬಿರ
ಕೊಣಾಜೆ, ಮಾ.7: ವಿಶ್ವ ಕಿಡ್ನಿ ದಿನಾಚರಣೆಯ ಪ್ರಯುಕ್ತ ಯೆನೆಪೋಯ ವಿಶ್ವವಿ ದ್ಯಾನಿಲಯ ಹಾಗೂ ಆಯುಕ್ತರ ಕಚೇರಿ, ಮಂಗಳೂರು ವಿಭಾಗದ ಜಂಟಿ ಆಶ್ರಯದಲ್ಲಿ ಉಚಿತ ರಕ್ತ ಮತ್ತು ಸ್ಥೂಲಕಾಯ ತಪಾಸನ ಶಿಬಿರವು ಸೋಮವಾರ ಮಂಗಳೂರಿನ ಆಯುಕ್ತರ ಕಚೇರಿಯಲ್ಲಿ ನಡೆಯಿತು.
ಮಂಗಳೂರು ನಗರ, ಅಪರಾದ ವಿಭಾಗದ ಪೋಲೀಸ್ ಉಪ ಆಯುಕ್ತರಾದ ಡಾ. ಸಂಜಯ್ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೋಲೀಸ್ ಆಯುಕ್ತರಾದ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಎ.ಸಿ.ಪಿ. ವ್ಯಾಲೆಂಟ್ಟೆನ್ಸ್ ಡಿಸೋಜ, ಹಾಗೂ ವಿವಿಧ ಪೋಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಸ್ಥ್ಥಿತರಿದ್ದರು ಮೂತ್ರರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಮುಜಿಬ್ ರಹಿಮಾನ್ ಹಾಗೂ ಮೂತ್ರಪಿಂಡ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ ಸಂತೋಷ್ ಮೂತ್ರಪಿಂಡ ಆರ್ಶೆಕೆಯ ವಿವಿದ ಅಂಶಗಳ ಮಾಹಿತಿ ನೀಡಿದರು.
ಕಿಡ್ನಿ ದಿನಾಚರಣೆಯ ಅಂಗವಾಗಿ ಆಸ್ಪತ್ರೆಯಲ್ಲಿ ಹಾಗೂ ಸಮುದಾಯದಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಗಳನ್ನು ನೀಡಿದರು. ಯುರೋಲೊಜಿ ವಿಭಾಗದ ಸಹಪ್ರದ್ಯಾಪಕರುಗಳಾದ ಡಾ ನಿಶ್ಚಿತ್ ಡಿಸೋಜ, ಡಾ ಸುದೇಶ್ ಶೆಟ್ಟಿ ಮತ್ತು ಡಾಅಲ್ತಾಫ್ ಖಾನ್ ಕಾರ್ಯಕ್ರಮದಲ್ಲಿ ಉಪಸ್ಥ್ಥಿತರಿದ್ದರು.
ಸುಮಾರು 137 ಪೋಲೀಸರು ಉಚಿತ ರಕ್ತ ಮತ್ತು ಸ್ಥೂಲಕಾಯತೆ ಸ್ಕೀರ್ರೃನಿಂಗ್ ಯೋಜನೆಯ ಲಾಭ ಪಡೆದುಕೂಂಡರು.