ಕಾಪು: ಗರೋಡಿ ಗೈಸ್‌ನಿಂದ ಮಿನದನ ಕಾರ್ಯಕ್ರಮ
ಕಾಪು, ಮಾ.7: ಗರೋಡಿ ಗೈಸ್ ವಾಟ್ಸಾಪ್ ಗ್ರೂಪ್ ವತಿಯಿಂದ ಗರೋಡಿ ಗೈಸ್ -ಮಿನದನ ಕಾರ್ಯಕ್ರಮ ಇತ್ತೀಚೆಗೆ ಉಡುಪಿ ಕಿನ್ನಿಮೂಲ್ಕಿ ಶ್ರೀಬ್ರಹ್ಮಬೈದರ್ಕಳ ಗರಡಿಯ ಪ್ರಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉದ್ಘಾಟಿಸಿದರು. ತುಳುನಾಡ ಗರೋಡಿಗಳ ಇತಿಹಾಸದ ಕುರಿತು ನಿಖಿಲ್ ಪೂಜಾರಿ ಹೆಬ್ರಿ, ಗರೋಡಿಗಳಲ್ಲಿರುವ ಆರಾಧನೆ ಮತ್ತು ಗಡಿ ಪಟ್ಟದ ವಿಚಾರಗಳ ಕುರಿತು ಉಮೇಶ್ ಕೋಟ್ಯಾನ್, ಬೈದರ್ಕಳ ದರ್ಶನ ಮತ್ತು ನೇಮೋತ್ಸವದ ಕುರಿತು ಗುರುರಾಜ್ ಪೂಜಾರಿ ಹೆಜಮಾಡಿ, ಗರೋಡಿಗಳ ಆರಾಧನಾ ಕ್ರಮದ ಕುರಿತು ಭಾಸ್ಕರ ಸುವರ್ಣ, ಗರೋಡಿ ಗಳಲ್ಲಿರುವ ಇಂದಿನ ಮತ್ತು ಮುಂದಿನ ಸವಾಲುಗಳ ಬಗ್ಗೆ ಅಗತ್ತಾಡಿ ದೋಲ ಬರಿಕೆಯ ಶೈಲೇಶ್ ಬಿರ್ವ ವಿಚಾರ ಮಂಡಿಸಿದರು.
ಬಳಿಕ ಪರಸ್ಪರ ಚರ್ಚೆ, ಸಂವಾದ, ವಿಚಾರ ವಿನಿಮಯ ನಡೆಯಿತು. ಗ್ರೂಪ್‌ನ ಅಡ್ಮಿನ್ ಮಹೇಶ್ ಸುವರ್ಣ ಬೋಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪವನ್ ಅಮೀನ್ ಬೋಳೂರು ಸ್ವಾಗತಿಸಿದರು. ನವೀನ್ ತೋನ್ಸೆ ವಂದಿಸಿದರು. ಪಾಂಡು ಕೋಟ್ಯಾನ್, ರಜತ್ ಜತ್ತನ್, ದೀಪಕ್ ಬೋಳೂರು, ನಿತಿನ್ ಬೋಳೂರು ಕಾರ್ಯಕ್ರಮ ಸಂಯೋಜಿಸಿದರು.