ಬಾಲಕಿಯ ಅಪಹರಣ: ದೂರು
Update: 2017-03-07 22:08 IST
ಮಂಗಳೂರು, ಮಾ. 7: ನಗರದ ಮಣ್ಣಗುಡ್ಡೆಯಲ್ಲಿ ಟ್ಯೂಶನ್‌ಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೋರ್ವಳನ್ನು ಕಾರಿನಲಲ ಅಪಹರಿಸಿದ ತಂಡ ಬಳಿಕ ಕದ್ರಿ ಪಾರ್ಕ್ ಬಳಿ ಬಿಟ್ಟುಹೋಗಿದ್ದಾರೆ ಎಂದು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಖಾಸಗಿ ಶಾಲೆಯೊಂದರ 9ನೆ ತರಗತಿಯ ವಿದ್ಯಾರ್ಥಿನಿ ಸೋಮವಾರ ಸಾಯಂಕಾಲ ಟ್ಯೂಷನ್‌ಗೆ ಹೋಗುತ್ತಿದ್ದಾಗ ಮಣ್ಣಗುಡ್ಡದಲ್ಲಿ ಕಾರಿನಲ್ಲಿ ಬಂದ ನಾಲ್ವರು ಅಗಂತುಕರು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ರಾತ್ರಿ ಬಾಲಕಿ ತಾಯಿ ಜತೆ ಬರ್ಕೆ ಠಾಣೆಗೆ ಬಂದು ದೂರು ನೀಡಿದ್ದಾಳೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಲೈಂಗಿಕ ದೌರ್ಜ್ಯದ ಬಗ್ಗೆ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.