×
Ad

ಮೂಡುಬಿದಿರೆ: ವಿಶೇಷ ಮಕ್ಕಳ ಸಾಧನ ಸಲಕರಣೆ ವಿತರಣೆ

Update: 2017-03-07 22:13 IST

ಮೂಡುಬಿದಿರೆ, ಮಾ.7: ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಮೂಡುಬಿದಿರೆ ವಲಯ ಇದರ ವತಿಯಿಂದ 50 ವಿಶೇಷ ಮಕ್ಕಳಿಗೆ 2016-17ನೇ ಸಾಲಿನ ಸಾಧನ ಸಲಕರಣೆಗಳನ್ನು ಬಿ.ಆರ್.ಸಿ ಕಛೇರಿಯಲ್ಲಿ ಮಂಗಳವಾರ ಶಾಸಕ ಕೆ. ಅಭಯಚಂದ್ರ ಜೈನ್ ಅವರು ವಿತರಿಸಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶಿರೂರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ನೋಡೆಲ್ ಪ್ರದೀಪ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮನ್ವಯ ಅಧಿಕಾರಿ ರಮೇಶ್ ಆಚಾರ್ಯ ಸ್ವಾಗತಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿ ಸುಶೀಲಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News