ಶಿಕ್ಷಣ ಪಡೆದ ಪ್ರಜೆಗಳು ರಾಷ್ಟ್ರದ ಸಂಪತ್ತು: ಬೈರಪ್ಪ
ಸುಳ್ಯ, ಮಾ.7: ಶಿಕ್ಷಣ ಪಡೆದ ಪ್ರಜೆಗಳು ರಾಷ್ಟ್ರದ ಸಂಪತ್ತು. ಪ್ರತಿಯೊಬ್ಬರು ಹೆಚ್ಚು ಹೆಚ್ಚು ಪದವಿಯನ್ನು ಪಡೆಯುತ್ತಿದ್ದಾರೆ. ಆದರೆ ಎಲ್ಲರಿಗೂ ಸೂಕ್ತ ರೀತಿಯಲ್ಲಿ ಉದ್ಯೋಗ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ವ ಉದ್ಯೋಗ ಶೀಲರನ್ನಾಗಿ ರೂಪಿಸಬೇಕಾಗಿದೆ. ಈ ಮೂಲಕ ರಾಷ್ಟ್ರದ ಅಭಿವೃದ್ಧಿಯಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕೆಂದು ಮಂಗಳ ಗಂಗೋತ್ರಿಯ ಮಂಗಳೂರು ಯುನಿರ್ವಸಿಟಿಯ ಉಪಕುಲಪತಿ ಪ್ರೊ.ಭೈರಪ್ಪ ತಿಳಿಸಿದರು.
ಅವರು ಮಂಗಳವಾರ ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾಚಿದಾನಂದ ಅಧ್ಯಕ್ಷತೆಯನ್ನು ವಹಿಸಿ,ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕರಾದ ಶೋಭಾ ಚಿದಾನಂದ, ಅಕ್ಷಯ್ ಕುರುಂಜಿ, ಪಡ್ಡಂಬೈಲು ವೆಂಕಟ್ರಮಣ ಗೌಡ, ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ ಅಡ್ತಲೆ, ಮದುವೆಗದ್ದೆ ಬೋಜಪ್ಪ ಗೌಡ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾಜಕೀರ ಜಬೆನ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಕೋಲ್ಚಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮಂಜುನಾಥ, ಕ್ಯಾಂಪಸ್ ಕ್ಷೇಮಾಧಿಕಾರಿ ಜವರೇಗೌಡ ಭಾಗವಹಿಸಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಖೇಶ್ ಬಿ.ಎಚ್, ಕಾರ್ಯದರ್ಶಿ ಚರಣ್ ಪಿ.ಎಸ್, ಉಪಾಧ್ಯಕ್ಷ ಪ್ರಸೀದ, ಜತೆ ಕಾರ್ಯದರ್ಶಿ ದರ್ಶಿತ್ ಬಿ.ಜೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಡಾಪೂವಪ್ಪ ಕಣಿಯೂರು ಸ್ವಾಗತಿಸಿ, ಪ್ರಾಂಶುಪಾಲ ಡಾಗಿರಿಧರ ಗೌಡ ಶೈಕ್ಷಣಿಕ ವರದಿ ವಾಚಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚರಣ್ ಪಿ.ಎಸ್ ವಂದಿಸಿದರು. ವಿದ್ಯಾರ್ಥಿನಿಯರಾದ ಸುಶ್ಮಿತಾ ಮತ್ತು ಗಾನವಿ ನಿರೂಪಿಸಿದರು.