×
Ad

ತೊಕ್ಕೊಟ್ಟು: ಬಟ್ಟೆ ಅಂಗಡಿ ಬೆಂಕಿಗಾಹುತಿ

Update: 2017-03-07 23:28 IST

ಮಂಗಳೂರು, ಮಾ.7: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಜಂಕ್ಷನ್ ಬಳಿ ಬಟ್ಟೆಬರೆ ಹಾಗೂ ಅಡುಗೆ ಸಂಬಂಧಿ ಸಾಮಗ್ರಿಗಳ ಮಳಿಗೆಯೊಂದು ಬೆಂಕಿ ಆಕಸ್ಮಿಕಕ್ಕೊಳಗಾಗಿ ಭಸ್ಮಗೊಂಡ ಘಟನೆ ಮಂಗಳವಾರ ರಾತ್ರಿ 10:30ರ ಸುಮಾರಿಗೆ ನಡೆದಿದೆ.

ಇಲ್ಲಿ ಕಾರ್ಯಾಚರಿಸುತ್ತಿದ್ದ ಬಾಂಬೆ ಬಝಾರ್ ಎಂಬ ಬೃಹತ್ ಮಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅದರೊಳಗಿದ್ದ ಬಟ್ಟೆಬರೆಗಳು ಸಹಿತ ಸೊತ್ತುಗಳೆಲ್ಲ ಸುಟ್ಟು ಕರಕಲಾಗಿವೆ.

ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News