ಟ್ರಾಫಿಕ್ ಸಿಗ್ನಲ್‌ನಲ್ಲಿ ಪುರುಷ ಚಿತ್ರ ಮಾತ್ರ ಯಾಕೆ ?

Update: 2017-03-08 09:32 GMT

ಮೆಲ್ಬರ್ನ್,ಮಾ.8: ಆಸ್ಟ್ರೇಲಿಯದ ಟ್ರಾಫಿಕ್ ಸಿಗ್ನಲ್ ಲೈಟ್‌ಗಳಲ್ಲಿ ಅದೇನು ಪುರುಷರ ಚಿತ್ರ ಮಾತ್ರ ಇದೆ. ಮಹಿಳೆಯರ ಚಿತ್ರ ಯಾಕಿಲ್ಲ ಎಂದು ಅಲ್ಲಿನ ಕೆಲವು ಪ್ರಗತಿಪರ ಸಂಘಟನೆಗಳು ಪ್ರಶ್ನಿಸಿ ಅಭಿಯಾನವನ್ನು ನಡೆಸುತ್ತಿದೆ. ಪ್ರಜ್ಞಾಪೂರ್ವಕವಾಗಿ ಲಿಂಗ ಅಸಮಾನತೆಯನ್ನು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮಾಡಲಾಗಿದೆ.

ಈ ತಾರತಮ್ಯವನ್ನು ನಿಲ್ಲಿಸಿ ಎಂದು ಮೆಲ್ಬರ್ನ್‌ನಲ್ಲಿ ಪ್ರಗತಿಪರರು ನಡೆಸಿದ ಚರ್ಚೆನಂತರ ಅಭಿಯಾನವಾಗಿ ಮಾರ್ಪಟ್ಟಿತು ಎಂದು ವರದಿಯಾಗಿದೆ.

ಕೆಲವರು ಈ ಅಭಿಯಾನವೇ ಅನವಶ್ಯಕ ಎಂದು ಟೀಕಿಸಿದ್ದಾರೆ. ಆದರೆ ಉದ್ದೇಶಪೂರ್ವಕವಲ್ಲದ ಇಂತಹ ಸಾವಿರಾರು ಚಿತ್ರಗಳು ತಪ್ಪು ಸಂದೇಶವನ್ನು ನೀಡುತ್ತದೆ ಎನ್ನುವ ಕಾರಣಕ್ಕಾಗಿ ದೇಶದ ಕೆಲವು ಕಡೆ ಸಿಗ್ನಲ್‌ಗಳಲ್ಲಿ ಮಹಿಳೆಯರ ಚಿತ್ರಗಳನ್ನು ಕೂಡಾ ಸೇರಿಸಲಾಗಿದೆ..

ಈ ರೀತಿ ಆಸ್ಟ್ರೇಲಿಯದ ಹತ್ತು ಕಡೆ ಸಿಗ್ನಲ್ ಲೈಟುಗಳಲ್ಲಿ ಲಿಂಗಸಮಾನತೆಯನ್ನು ಜಾರಿಗೆ ತಂದು ಪುರುಷರು ಮತ್ತು ಮಹಿಳೆಯರ ಎರಡೂ ಚಿತ್ರಗಳನ್ನು ಸ್ಥಾಪಿಸಲಾಗಿದೆ.

ತೆರಿಗೆ ನೀಡುವವರ ಹಣದ ದುರುಪಯೋಗ ಇದೆಂದು ಮೇಯರ್ ಹೇಳಿದರೂ, ಮಹಿಳಾವಾದಿ ರಾಜಕೀಯ ನಿಲುವಿನವರು ತಮ್ಮ ವಾದದಲ್ಲಿ ಅಚಲವಾಗಿ ನಿಂತಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News