×
Ad

ಮಾ.10: ಮುಕ್ವೆಯಲ್ಲಿ ಬುರ್ದಾ-ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ

Update: 2017-03-08 17:13 IST

ಪುತ್ತೂರು, ಮಾ.8: ಎಸ್‌ವೈಎಸ್, ಎಸ್ಸೆಸ್ಸೆಫ್, ಎಸ್‌ಬಿಎಸ್ ಮುಕ್ವೆ ಪುರುಷರಕಟ್ಟೆ ಯುನಿಟ್ ಇದರ ವತಿಯಿಂದ ಮಾ.10ರಂದು ಸಂಜೆ ಬುರ್ದಾ ಹಾಗೂ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ಮುಕ್ವೆಯಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸ್ವಾಗತ ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಇಂದಾದಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮುಕ್ವೆಯ ಪೂಕೋಯ ತಂಙಳ್ ನಗರದ ಮರ್‌ಹೂಂ ಝಿಯಾದ್ ವೇದಿಕೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಸ್ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ದುವಾರ್ಶೀವಚನ ನೀಡಲಿದ್ದಾರೆ. ಮುಕ್ವೆ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಎಂ.ಎ.ಅಬ್ದುಲ್ಲ ಹಾಜಿ ಮುಕ್ವೆ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮವನ್ನು ರಾಜ್ಯ ಹಜ್ ಸಮಿತಿಯ ಸದಸ್ಯ ಹಾಗೂ ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸಲಿದ್ದಾರೆ. ಪೆರ್ಲ ಮುದರ್ರಿಸ್ ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ ಮುಖ್ಯ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯ ವಕ್ಫ್ ಸಮಿತಿಯ ಮಾಜಿ ಸದಸ್ಯ ಅಲ್‌ಹಾಜ್ ಶಾಫಿ ಸಅದಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್, ಜಿಲ್ಲಾ ವಕ್ಫ್ ಸಮಿತಿಯ ಮಾಜಿ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಸಂಪ್ಯ ಠಾಣೆಯ ಉಪನಿರೀಕ್ಷಕರಾದ ಅಬ್ದುಲ್ ಖಾದರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಇಖ್ವಾನು ತಾಜುಸ್ಸುನ್ನಃ ಬುರ್ದಾ ಫೌಂಡೇಶನ್ ಕೆಮ್ಮಾಯಿ ವತಿಯಿಂದ ಬುರ್ದಾ ಆಲಾಪನೆ ನಡೆಯಲಿದೆ. ಕೆಮ್ಮಾಯಿ ದರ್ಸ್ ವಿದ್ಯಾರ್ಥಿ ಮುಹಮ್ಮದ್ ಅನ್ಸಾರ್ ಮುಕ್ವೆ ಬುರ್ದಾ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ. ಮಾಸ್ಟರ್ ಸೈಫಾಝ್ ರಾಝರಿಂದ ನಅತೇ ಶರೀಫ್ ಆಲಾಪನೆ ನಡೆಯಲಿದೆ.

ಅಮಾನ್ ಕಾಟಿಪಳ್ಳ ಇಶಲ್ ವಿರುನ್ನ್ ಸಲ್ಲಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಹಜ್ ಸಮಿತಿಯ ಸದಸ್ಯ ಹಾಗೂ ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಹಯಾತುಲ್ ಇಸ್ಲಾಂ ಮದ್ರಸ ಮುಕ್ವೆ ಇದರ ಮಾಜಿ ಮುಖ್ಯ ಅಧ್ಯಾಪಕ ಅಲ್‌ಹಾಜ್ ಅಬ್ದುಲ್ ರಝಾಕ್ ಮುಸ್ಲಿಯಾರ್, ದಾರುಲ್ ಇರ್ಶಾದ್ ಎಜ್ಯುಕೇಶನ್ ಸೆಂಟರ್ ಮಾಣಿ ಇದರ ಜನರಲ್ ಮೆನೇಜರ್ ಅಲ್ಹಾಜ್ ವಿ.ಎಂ.ಇಬ್ರಾಹೀಂ ಸಅದಿಯವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್ ಅಧ್ಯಕ್ಷ ಹಸನ್ ಸಅದಿ, ಕೋಶಾಧಿಕಾರಿ ಹಾಜಿ ಅಹ್ಮದ್, ಎಸ್ಸೆಸ್ಸೆಫ್ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಹಾಜಿ, ಸ್ವಾಗತ ಸಮಿತಿಯ ಉಪಾಧ್ಯಕ್ಷ ಹಾರಿಸ್ ಮಣಿಯಾ, ಪ್ರಧಾನ ಕಾರ್ಯದರ್ಶಿ ಹುಸೈನ್ ಕೆಸಿಎಫ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News