ಮೂಳೂರು: ಸುನ್ನಿ ಸೆಂಟರ್‌ನಲ್ಲಿ ಹುಖೂಖುಲ್ ಇಬಾದ್ ಕಾರ್ಯಕ್ರಮ
ಮೂಳೂರು: ಮಾ 8: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಸುನ್ನಿ ಜಂ-ಇಯ್ಯತುಲ್ ಮುಅಲ್ಲಿಮೀನ್ ಮತ್ತು ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಇವರ ಜಂಟಿ ಆಶ್ರಯದಲ್ಲಿ ಕಾಪು ಮತ್ತು ಕಣ್ಣಂಗಾರ್ ರೇಂಜ್‌ಗೊಳಪಟ್ಟ ಮಸೀದಿಗಳ ಖತೀಬರು, ಮದ್ರಸ ಅದ್ಯಾಪಕರು ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ಪದಾಧಿಕಾರಿಗಳ ಸ್ನೇಹ ಸಮ್ಮಿಲನವು ಮೂಳೂರಿನ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನಲ್ಲಿ ನಡೆಯಿತು.
ಹುಖೂಖುಲ್ ಇಬಾದ್-ಮನುಕುಲದ ಸೇವೆ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಬಿ.ಕೆ ಅಬೂಬಕ್ಕರ್ ಮುಸ್ಲಿಯಾರ್, ಅಧ್ಯಕ್ಷರು, ಸುನ್ನಿ ಜಂ-ಇಯ್ಯತುಲ್ ಮುಅಲ್ಲಿಮೀನ್ ಉಡುಪಿ ಜಿಲ್ಲೆ ಉದ್ಘಾಟಿಸಿದರು.
ಮೂಳೂರು ಸುನ್ನೀ ಸೆಂಟರ್‌ನ ಮ್ಯಾನೇಜರ್ ಮುಸ್ತಫಾ ಸಅದಿ ಅಧ್ಯಕ್ಷತೆ ವಹಿಸಿದ್ದರು.
ಹುಖೂಖೂಲ್ ಇಬಾದ್ ಬಗ್ಗೆ ಕೆ.ಸಿ.ಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್.ಪಿ ಹಂಝ ಸಖಾಫಿ, ಟ್ಯಾಲೆಂಟ್ ಸಲಹೆಗಾರ ರಫೀಖ್ ಮಾಸ್ಟರ್ ತರಗತಿ ನಡೆಸಿದರು.
ವೇದಿಕೆಯಲ್ಲಿ ಸುನ್ನೀ ಸೆಂಟರ್‌ನ ಸಿದ್ದೀಖ್ ಸಅದಿ, ದಾವಾ ಕಾಲೇಜಿನ ಅದ್ಯಾಪಕರಾದ ಸ್ವಾಬಿರ್ ಸಅದಿ, ಸುಹೈಲ್ ಸಅದಿ, ಕಾಪು ಮಸೀದಿ ಖತೀಬ್ ಅಹಮದ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ಅಲ್ ಇಹ್ಸಾನ್ ಹಿಫ್ಲುಲ್ ಕುರ್‌ಆನ್ ಕಾಲೇಜಿನ ಶಿಕ್ಷಕ ಅರ್ಷದ್ ಅಮೀನ್ ದೆಹಲಿ ಖಿರಾಅತ್ ಪಠಿಸಿದರು. ಕಾರ್ಯಕ್ರಮ ಸಂಯೋಜಕ ಅಸ್ಪರ್ ಹುಸೈನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಟ್ಯಾಲೆಂಟ್ ಸದಸ್ಯ ಅಸ್ಲಂ ಗೂಡಿನಬಳಿ ಕಾರ್ಯಕ್ರಮ ನಿರೂಪಿಸಿದರು.