ಮಂಗಳೂರು: ಬಿಗ್‌ಬಜಾರ್‌ನಲ್ಲಿ ಮಹಿಳಾ ದಿನಾಚರಣೆ
Update: 2017-03-08 18:11 IST
ಮಂಗಳೂರು, ಮಾ.8: ನಗರದ ಅತ್ತಾವರ ಬಿಗ್‌ಬಜಾರ್‌ನಲ್ಲಿ ಬುಧವಾರ ವಿಶ್ವ ಮಹಿಳಾ ದಿನವನ್ನು ಅಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿತ್ರನಟಿ ಅನ್ವಿತಾ ಸಾಗರ್ ಮತ್ತು ಎನ್‌ಜಿಒ ಸಂಸ್ಥೆಯಾ ಕಾರ್ಡ್ಸ್‌ನ ಜಯಲತಾ 'ವುಮೆನ್ಸ್ ಶಾಪಿಂಗ್ ಡೇ'ಯ ಕೂಪನನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಮಹಿಳಾ ದಿನಾಚರಣೆಯ ಅಂಗವಾಗಿ 2,000 ರೂ. ಖರೀದಿಗೆ 1,000 ರೂ. ಬೆಲೆಯ ಉಚಿತ ಕೂಪನ್ ವಿತರಿಸಲಾಯಿತು. ಮಹಿಳೆಯರಿಗೆ ವಿಶೇಷ ಹಾಗೂ ಆಕರ್ಷಕ ಕೊಡುಗೆಗಳು ಬಿಗ್‌ಬಜಾರ್‌ನಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.