ಬಿ.ಸಿರೋಡ್: ಪುರಸಭೆ ಕಸದ ರಾಶಿಗೆ ಬೆಂಕಿ
Update: 2017-03-08 18:25 IST
ಬಂಟ್ವಾಳ, ಮಾ.8: ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಬಳಿ ಪುರಸಭೆಯಿಂದ ಹಾಕಿರುವ ಕಸದ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಕೆಲವು ಸಮಯದ ಹಿಂದೆ ಇದೇ ರೀತಿ ಇಲ್ಲಿ ಕಸದ ರಾಶಿಗೆ ಬೆಂಕಿ ಬಿದ್ದು ಚರ್ಚೆಗೆ ಕಾರಣವಾಗಿತ್ತು.
ಇದೀಗ ಮತ್ತೆ ಇಲ್ಲಿ ಕಸದ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕಾರ್ಮಿಕರೇ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಸುತ್ತಮುತ್ತಲಿನ ಮರ ಗಿಡಗಳಿಗೆ ಬೆಂಕಿಯ ಜ್ವಾಲೆ ತಗಲಿದ್ದು ಸುದ್ದಿ ತಿಳಿದ ಬಂಟ್ವಾಳ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.