×
Ad

ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸಬೇಕು: ಎಸಿಪಿ ಶೃತಿ

Update: 2017-03-08 19:24 IST

ಉಳ್ಳಾಲ, ಮಾ.8: ನಮ್ಮ ದೇಹದ ಬಗ್ಗೆ ನಾವು ಕಾಳಜಿ ಹೊಂದಿರಬೇಕು. ಸ್ಥೂಲಕಾಯಕ್ಕೆ ಒಳಗಾದ ನಂತರ ವ್ಯಥೆ ಪಡುವುದಕ್ಕಿಂತ ಮುಂಜಾಗರೂಕತೆ ಅತಿ ಮುಖ್ಯ. ನಮ್ಮ ದೇಹವನ್ನು ಸುಂದರಗೊಳಿಸುವುದು ಅಥವಾ ಬೊಜ್ಜು ತುಂಬಿದ ದೇಹ ಬೆಳೆಸುವ ಆಯ್ಕೆ ನಮ್ಮಲ್ಲಿಯೇ ಇದೆ ಎಂದು ಎಂದು ಎಸಿಪಿ ಶೃತಿ ಹೇಳಿದರು.

 ವಿಶ್ವ ಕಿಡ್ನಿ ದಿನಾಚರಣೆಯ ಪ್ರಯುಕ್ತ ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಕಿಡ್ನಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಸ್ಥೂಲಕಾಯ ಸಮಸ್ಯೆ ಹೆಚ್ಚಿನ ಪ್ರಕರಣಗಳಲ್ಲಿ ನಮ್ಮ ನಿರ್ಲಕ್ಷ್ಯತನದಿಂದ ಸೃಷ್ಟಿಯಾಗುತ್ತದೆ. ನನ್ನ ಸ್ವಂತ ಅನುಭದಲ್ಲಿ ಹೇಳುವುದಾದರೆ ಪಿಯುಸಿಯಲ್ಲಿ ಕಲಿಯುತ್ತಿರುವಾಗ ನನ್ನ ದೇಹ ತೂಕ 73ರಷ್ಟಿದ್ದು ಬಳಿಕ ತೂಕವನ್ನು ನಿಯಮಿತ ಆಹಾರ ಸೇವನೆಯ ಮೂಲಕ ಕಳೆದುಕೊಂಡಿದ್ದೇನೆ. ಆಹಾರದ ಆಯ್ಕೆ ಹಾಗೂ ಸೇವನೆಯ ಹಂತದಲ್ಲಿ ಹತೋಟಿ ಹೊಂದಿರಬೇಕು ಎಂದು ನುಡಿದರು.

  ಅಧ್ಯಕ್ಷತೆ ವಹಿಸಿದ ಮಾತನಾಡಿದ ಸಹ ಪ್ರಾಧ್ಯಾಪಕ ಡಾ. ಮಹಮ್ಮದ್ ಎ ವಾಣಿ ಅವರು ಜ್ಯೋತಿ ಸಂಜೀವಿನಿ ಸೇರಿದಂತೆ ಯೇನೆಪೋಯ ಆಸ್ಪತ್ರೆಯಲ್ಲಿ ಸರಕಾರಿ ನೌಕರರಿಗೆ ವಿವಿಧ ಯೋಜನೆಯಲ್ಲಿ ಚಿಕಿತ್ಸೆ ಲಭ್ಯವಿದ್ದು ದೆಶದ ಇತರ ಭಾಗದಲ್ಲಿ ಇರುವ ಚಿಕಿತ್ಸಾ ವೆಚ್ಚಕ್ಕಿಂತಲೂ ಆಧುನಿಕ ಸೌಲಭ್ಯ ಹೊಂದಿದ ಚಿಕಿತ್ಸೆ ರಿಯಾಯಿತಿ ದರದಲ್ಲಿ ಲಭ್ಯವಿದೆ. ಸರಕಾರಿ ನೌಕರರು ಈ ಸೌಲಭ್ಯ ಪಡೆಯಬೇಕು. ಹಾಗೆಯೇ ಕೊಡ್ನಿ ದನ ಮಾಡುವುದರಿಂದ ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದರು.

  ಕಿಡ್ನಿಯಲ್ಲಿ ಎದುರಾಗುವ ರೋಗ ಹಾಗೂ ಸ್ಥೂಲಕಾಯ ನಿವಾರಣೆಗೆ ನಮ್ಮ ದೇಹದಲ್ಲಾಗುವ ನಿತ್ಯದ ಬದಲಾವಣೆ ಹಾಗೂ ನಾವು ನಿತ್ಯ ತಿನ್ನುವ ಆಹಾರದ ಮೇಲೆ ಹಿಡಿತ ಇಲ್ಲದಿದ್ದರೆ ಸಂಭವಿಸುವುದರಿಂದ ಆಗಾಗ್ಗೆ ನಮ್ಮ ಆರೋಗ್ಯದ ಬಗ್ಗೆ ತಪಾಸನೆ ಮಾಡಿಕೊಳ್ಳುವುದು ಉತ್ತಮ ಎಂದು ಮೂತ್ರರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮುಜಿಬ್ ರಹಿಮಾನ್ ಹೇಳಿದರು.

 ಯೇನೆಪೋಯ ಆಸ್ಪತ್ರೆಯ ಮೂತ್ರಪಿಂಡ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಂತೋಷ್ ಪೈ ಮೂತ್ರಪಿಂಡ ಆರೈಕೆಯ ವಿವಿಧ ಅಂಶಗಳು ಹಾಗೂ ಕಿಡ್ನಿ ದಿನಾಚರಣೆಯ ಅಂಗವಾಗಿ ಆಸ್ಪತ್ರೆಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಮಣಿಪಾಲದಿಂದ ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಗೆ ಕಿಡ್ನಿ ಸಾಗಣೆಯ ಕಾರ್ಯಕ್ರಮದಲ್ಲಿ ಗ್ರೀನ್ ಕಾರಿಡಾರ್‌ನಲ್ಲಿ ಬೆಂಗಳೂರು ಪೊಲೀಸರಿಗೆ ಸಮನಾಗಿ ಕೆಲಸ ಮಾಡಿದ್ದು ಶ್ಲಾಘನೀಯ ಎಂದರು.

 ಕಾರ್ಯಕ್ರಮದಲ್ಲಿ ತಿರುವನಂತಪುರ ಹೀರಾ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕಿ ಸುರುಮಿ ಪರ್ಹಾದ್ ಅವರು ಮೂತ್ರಪಿಂಡ ದಾನ ಒಪ್ಪಂದಕ್ಕೆ ಸಹಿ ಹಾಕಿದರು.

 ಯೇನೆಪೋಯ ವಿಶ್ವವಿದ್ಯಾಲಯ ಕುಲಸಚಿವ ಡಾ. ಶ್ರೀಕುಮಾರ್ ಮೆನನ್ ಉಪಸ್ಥಿತರಿದ್ದರು.

  ಡಾ. ಅಲ್ತಾಪ್ ಖಾನ್ ಸ್ವಾಗತಿಸಿದರು. ಜುಮಾ ರಶೀದ್ ನಿಶತ್ ಶಹಿಕ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ರಾಜ್ಯ ಯೋರೋಲಾಜಿ ಸೊಸೈಟಿಯ ಕಾರ್ಯದರ್ಶಿ, ಯುರೋಲೊಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ನಿಶ್ಚಿತ್ ಡಿಸೋಜ ವಂದಿಸಿದರು.

ಹಣ್ಣು, ತರಕಾರಿ ಹಾಗೂ ಮಿತ ಆಹಾರ ಸೇವನೆ ನಮ್ಮ ದೇಹದ ತೂಕ ಹೆಚ್ಚುವುದನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ನನ್ನ ಸ್ವಂತ ಅನುಭವ. ಯೋಗ ಸಹ ನಮ್ಮ ಆರೋಗ್ಯ ಕಾಪಾಡುವಲ್ಲಿ ಉಪಯುಕ್ತವಾಗುತ್ತದೆ. ಎಲ್ಲಕ್ಕಿಂತಲೂ ಆರೋಗ್ಯವೇ ನಮ್ಮ ಶ್ರೇಷ್ಠ ಸಂಪತ್ತು.

- ಎಸಿಪಿ ಶೃತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News