ಮೂಡುಮಾರ್ನಾಡು: ದಂಪತಿ ನಾಪತ್ತೆ
Update: 2017-03-08 19:55 IST
ಮೂಡುಬಿದಿರೆ, ಮಾ,8: ಮುಂಬೈ ನಿವಾಸಿ, ಮೂಲತ ಮೂಡುಮಾರ್ನಾಡು ಗ್ರಾಮದ ಜಯಪೂಜಾರಿ (46) ಮತ್ತು ಪತ್ನಿ ಶಕುಂತಳಾ ಎಂಬವರು ಫೆ 28ರಂದು ಊರಿಗೆ ಬಂದಿದ್ದರೂ ಮನೆಗೆ ಬರದೆ ನಾಪತ್ತೆಯಾಗಿದ್ದಾರೆ.
ಜಯಪೂಜಾರಿ ಮುಂಬೈಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದಾರೆನ್ನಲಾಗಿದೆ. ಕಳೆದ ಫೆ. 27ರಂದು ಮುಂಬೈನಿಂದ ಖಾಸಗಿ ಬಸ್‌ನಲ್ಲಿ ಬಂದು ಬೆಳುವಾಯಿಯಲ್ಲಿ ಇಳಿದಿರುವ ಕುರಿತು ಜಯಪೂಜಾರಿ ತನ್ನ ತಂಗಿಯೆ ಮಗನಿಗೆ ಕರೆ ಮಾಡಿ ತಿಳಿಸಿದ್ದರು.
ಘಟನೆ ಹಿನ್ನೆಲೆಯಲ್ಲಿ ಜಯಪೂಜಾರಿ ಸಹೋದರ ಶ್ರೀಧರ ಪೂಜಾರಿ ಮೂಡುಬಿದಿರೆ ಪೋಲಿಸರಿಗೆ ದೂರು ನೀಡಿದ್ದಾರೆ.
ಮೂಡುಬಿದಿರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.