×
Ad

ಚೆನ್ನೈಯಲ್ಲಿ ಅಪಘಾತ: ಬೆಳಪು ಚಾಲಕ ಮೃತ್ಯು

Update: 2017-03-08 21:28 IST

ಕಾಪು, ಮಾ.8: ತಮಿಳುನಾಡಿನ ವೆಲ್ಲೂರು-ಅಂಬೂರು ನಡುವಿನ ಚೆನ್ನೈ ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಮತ್ತು ಮಹೀಂದ್ರ ಪಿಕಪ್ ಮಧ್ಯೆ ಇಂದು ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಪಿಕಪ್ ಚಾಲಕ ಕಾಪು ಸಮೀಪದ ಬೆಳಪು ನಿವಾಸಿ ರಿಯಾಝ್ ಹುಸೇನ್(46) ಮೃತಪಟ್ಟಿದ್ದಾರೆ.

ಇವರು ಎರಡು ದಿನಗಳ ಹಿಂದೆ ಮಹೀಂದ್ರ ಪಿಕ್‌ಅಪ್‌ನಲ್ಲಿ ಮಲ್ಪೆ ಯಿಂದ ಮೀನು ತುಂಬಿಕೊಂಡು ಚೆನ್ನೈಗೆ ತೆರಳಿದ್ದು, ದಾರಿ ಮಧ್ಯೆ ಅಂಬೂರು ಬಳಿ ಕೆಟ್ಟು ನಿಂತಿದ್ದ ಈಚರ್ ಲಾರಿಗೆ ಪಿಕ್‌ಅಪ್ ವಾಹನ ಹಿಂದಿನಿಂದ ಢಿಕ್ಕಿ ಹೊಡೆಯಿತು.

ಇದರಿಂದ ಪಿಕ್‌ಅಪ್ ವಾಹನ ಸಂಪೂರ್ಣ ಜಖಂಗೊಂಡಿದ್ದು, ಗಂಭೀರ ಗಾಯಗೊಂಡ ರಿಯಾಝ್ ಸ್ಥಳದಲ್ಲೇ ಮೃತಪಟ್ಟರು. ವಾಹನ ದಲ್ಲಿದ್ದ ನಾವುಂದ ನಿವಾಸಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News