ಮಂಗಳೂರು: ಕೆನರಾ ವಾಣಿಜ್ಯ ಕೈಗಾರಿಕಾ ಸಂಸ್ಥೆ ವತಿಯಿಂದ ಸಂವಾದ ಕಾರ್ಯಕ್ರಮ
Update: 2017-03-08 22:16 IST
ಮಂಗಳೂರು, ಮಾ.8: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ನಗರದ ಸಂಸ್ಥೆಯ ಕಚೇರಿಯಲ್ಲಿ (ಕೆಸಿಸಿಐ) ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆನಡಾ ಕಾನ್ಸುಲೇಟ್ ಜನರಲ್‌ನ ದಕ್ಷಿಣ ಭಾರತದ ಕಾನ್ಸುಲ್ ಜನರಲ್ ಜೆನ್ನಿಫರ್ ಡಾನಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆನಡಾ ಕಾನ್ಸುಲ್ ಮತ್ತು ಹಿರಿಯ ವ್ಯಾಪಾರ ಕಮಿಷನರ್ ಸ್ಟೇನ್ಲಿ ಗೋಮ್ಸ್, ಕೆಸಿಸಿಐ ಅಧ್ಯಕ್ಷ ಜೀವನ್ ಸಲ್ಡಾನ, ಉಪಾಧ್ಯಕ್ಷೆ ವಟಿಕಾ ಪೈ, ಕಾರ್ಯದರ್ಶಿಗಳಾದ ಪ್ರವೀಣ್‌ಕುಮಾರ್ ಕಲ್ಲಭಾವಿ, ಪಿ.ಬಿ.ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.