ಸ್ಪರ್ಧೆ, ಅಪರಿಮಿತ ನಿರೀಕ್ಷೆ ಇಂದಿನ ಒತ್ತಡದ ಬದುಕಿಗೆ ಕಾರಣ: ಡಾ.ಪಿ.ವಿ.ಭಂಡಾರಿ

Update: 2017-03-08 17:05 GMT

ಉಡುಪಿ, ಮಾ.8: ಇತರರೊಂದಿಗೆ ಹೋಲಿಕೆ, ಅತ್ಯುತ್ತಮಕ್ಕಾಗಿ ಸ್ಪರ್ಧೆ ಹಾಗೂ ಅಪರಿಮಿತ ನಿರೀಕ್ಷೆ, ತಾಂತ್ರಿಕ ಬೆಳವಣಿಗೆ ಇಂದಿನ ಒತ್ತಡದ ಬದುಕಿಗೆ ಪ್ರಮುಖ ಕಾರಣವಾಗಿದೆ. ನಾವು ಪ್ರತಿದಿನದ ಬದುಕನ್ನು ಯೋಜನಾಬದ್ಧವಾಗಿ ರೂಪಿಸುವುದರಿಂದ ದೈನಂದಿನ ಜೀವನದಲ್ಲಿ ಒತ್ತಡ ನಿರ್ವಹಣೆ ಸಾಧ್ಯ ಎಂದು ನಾಡಿನ ಖ್ಯಾತನಾಮ ಮನ:ಶಾಸ್ತ್ರಜ್ಞ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಪರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಱಸ್ವಚ್ಛ ಶಕ್ತಿ ಸಪ್ತಾಹೞದಲ್ಲಿ ಱಸಂತಸದ ಕೆಲಸ ಸಂತೃಪ್ತಿಯ ಮನೆೞ ವಿಷಯದ ಕುರಿತು ಉಪನ್ಯಾಸ ನೀಡಿದರು.

 ಹಾಲು ಸೀದುವುದರಿಂದ ಹಿಡಿದು ವಿಚ್ಛೇದನದವರೆಗಿನ ಹಲವು ಪ್ರಕರಣ ಗಳಿಗೆ ಇಂದಿನ ಇಂಟರ್‌ನೆಟ್, ವಾಟ್ಸಾಪ್ ದುರ್ಬಳಕೆ ಕಾರಣವಾಗಿದೆ ಎಂದ ಅವರು, 8 ಗಂಟೆಗೂ ಮಿಗಿಲಾಗಿ ಅವಿರತ ದುಡಿಮೆಯಿಂದ ಮಹಿಳೆಯರಲ್ಲಿ ಖಿನ್ನತೆ ಹೆಚ್ಚುತ್ತಿದೆ ಎಂಬುವುದನ್ನು ವಿಶ್ಲೇಷಿಸಿದರು.

ಸಂಕಷ್ಟಗಳನ್ನು ನಂಬಿಕಸ್ಥರೊಂದಿಗೆ ಹಂಚಿಕೊಳ್ಳಿ. ಸಾಧ್ಯವಾಗದ ಕೆಲಸಗಳನ್ನು ಒಪ್ಪಿಕೊಳ್ಳದಿರಿ ಎಂದು ಸಲಹೆ ಮಾಡಿದ ಅವರು, ಉತ್ತಮ ಆಹಾರ, ಸದ್ವಿಚಾರ ಗಳನ್ನು ಅಳವಡಿಸಿಕೊಳ್ಳುವುದರಿಂದ ಮಕ್ಕಳಿಗೆ ಉತ್ತಮ ಮಾದರಿಗಳಾಗಲು ಸಾಧ್ಯ ಎಂದವರು ಸಲಹೆ ನೀಡಿದರು.

1990ರಲ್ಲಿ ಶೇ.17ರಷ್ಟು ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿದ್ದರೆ, 2001 ರ ವೇಳೆಗೆ ಇಂದು ಶೇ.24, 2010ರಲ್ಲಿ ಶೇ.44ರಷ್ಟು ಮಹಿಳೆಯರು ಉದ್ಯೋಗ ದಲ್ಲಿ ನಿರತರಾಗಿದ್ದಾರೆ. ಸುಮಾರು 11 ಕೈಗಾರಿಕೆಗಳಲ್ಲಿ ಮಹಿಳೆಯರು ಪ್ರಮುಖವಾಗಿ ದುಡಿಯುತ್ತಿದ್ದಾರೆ. ಕ್ರಮಬದ್ಧ ಜೀವನ ಶೈಲಿಯಿಂದ ಮಾತ್ರ ಮಹಿಳೆಯರು ಯಶಸ್ವಿಯಾಗಲು ಸಾಧ್ಯವಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News