ಮಣಿಪಾಲ: ಬಸ್‌ನಿಂದ ಬಿದ್ದು ಮೃತ್ಯು
Update: 2017-03-08 22:57 IST
ಮಣಿಪಾಲ, ಮಾ.8: ಪೆರಂಪಳ್ಳಿ ಬಸ್ ನಿಲ್ದಾಣದ ಬಳಿ ಮಾ.7ರಂದು ಬೆಳಗ್ಗೆ ಬಸ್ ಚಾಲಕ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಬಾಗಿಲಿನಲ್ಲಿ ಇಳಿಯಲು ನಿಂತಿದ್ದ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕೃಷ್ಣ ಎಂದು ಗುರುತಿಸಲಾಗಿದೆ. ಇವರು ಮಣಿಪಾಲಕ್ಕೆ ಹೋಗಲು ಸಂತೆಕಟ್ಟೆ ಬಸ್ ನಿಲ್ದಾಣದಲ್ಲಿ ದುರ್ಗಾಂಬ ಬಸ್ ಹತ್ತಿದ್ದು, ಬಸ್ ಅಂಬಾಗಿಲು ಮಾರ್ಗವಾಗಿ ಪೆರಂಪಳ್ಳಿ ಕಡೆಗೆ ಬರುತ್ತಿರುವಾಗ ಕೃಷ್ಣ ಪೆರಂಪಳ್ಳಿ ಯಲ್ಲಿ ಇಳಿಯಲು ಬಸ್‌ನ ಹಿಂಬದಿ ಬಾಗಿಲ ಬಳಿ ಬಂದು ನಿಂತಿದ್ದರು.
ಆಗ ಚಾಲಕ ಬಸ್ಸನ್ನು ನಿರ್ಲಕ್ಷಕತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಕೃಷ್ಣ ಹಾಗೂ ಶ್ರೇಯಸ್ ಎಂಬವರು ಆಯತಪ್ಪಿ ರಸ್ತೆಗೆ ಬಿದ್ದರು. ಇವರಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ಕೃಷ್ಣ ಚಿಕಿತ್ಸೆ ಫಲಕಾರಿ ಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.