×
Ad

ಸರ ಕಳವಿಗೆ ಯತ್ನ: ಓರ್ವನ ಬಂಧನ

Update: 2017-03-08 23:38 IST

ಕಾರ್ಕಳ, ಮಾ.8: ಕುಂಟಲ್ಪಾಡಿ ಸ್ನೇಹ ವರ್ಕ್‌ಶಾಪ್ ಬಳಿ ಮಾ.7ರಂದು ಸಂಜೆ ವೇಳೆ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸರವನ್ನು ಅಪರಿಚಿತನೊಬ್ಬ ಅಪಹರಿಸಲು ಯತ್ನಿಸಿದ್ದು ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಮಿಯ್ಯಿರು ಗ್ರಾಮದ ಕರಿಯಕಲ್ಲು ನಿವಾಸಿ ರಮೇಶ್ ದೇವಾಡಿಗ ಎಂಬವರ ಪತ್ನಿ ಪ್ರೇಮ ದೇವಾಡಿಗ(52) ಎಂಬವರು ಕುಂಟಲ್ಪಾಡಿ ಅಂಗನವಾಡಿ ಶಾಲೆ ಬಳಿ ಇರುವ ತನ್ನ ಗೂಡಂಗಡಿಯನ್ನು ಬಂದ್ ಮಾಡಿ ವಾಪಾಸು ಮನೆ ಕಡೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಅಪರಿಚಿತ ವ್ಯಕ್ತಿ ಪ್ರೇಮರ ಕುತ್ತಿಗೆಗೆ ಕೈ ಹಾಕಿ ಅವರ ಕರಿಮಣಿ ಸರವನ್ನು ಎಳೆಯಲು ಪ್ರಯತ್ನಿಸಿದನು.

ಆಗ ಪ್ರೇಮ ತನ್ನ ಕೈಯ್ಯಲ್ಲಿದ್ದ ಟಿಫಿನ್ ಬಾಕ್ಸ್ ಬೀಸಿದಾಗ ಕರಿಮಣಿ ಸರ ಆತನ ಕೈಗೆ ಸಿಗಲಿಲ್ಲ. ಆ ವೇಳೆ ಪ್ರೇಮ ಬೊಬ್ಬೆ ಹಾಕಿದಾಗ ಸ್ಥಳೀಯರು ಬಂದು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News