×
Ad

ನಾಳೆ ‘ಮದಿಪು’ ಸಿನೆಮಾ ಬಿಡುಗಡೆ

Update: 2017-03-08 23:50 IST

ಮಂಗಳೂರು, ಮಾ.8: ತುಳುನಾಡಿನ ಸಂಸ್ಕೃತಿ, ಭೂತರಾಧನೆಯನ್ನು ಬಿಂಬಿಸುವ ಕಲಾತ್ಮಕ ಚಿತ್ರ ‘ಮದಿಪು’ ಕರಾವಳಿಯ ಪ್ರಮುಖ ಸಿನೆಮಾ ಥಿಯೇಟರ್‌ಗಳಲ್ಲಿ ಮಾ.10ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಚೇತನ್ ಮುಂಡಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರಾವಳಿಯ ಐದು ಸಿಂಗಲ್ ಥಿಯೇಟರ್ ಹಾಗೂ ನಾಲ್ಕು ಮಲ್ಟಿಫ್ಲೆಕ್ಸ್ ಸಿನೆಮಾ ಮಂದಿರದಲ್ಲಿ ಮದಿಪು ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು.

  ಚಿತ್ರದಲ್ಲಿ ನಟಿಸಿದ ಕಲಾವಿದ ಚೇತನ್ ರೈ ಮಾಣಿ ಮಾತನಾಡಿ, ಕಲಾತ್ಮಕ ಚಿತ್ರವಾದ ಮದಿಪು ತುಳು ಚಿತ್ರರಂಗದಲ್ಲಿ ಹೊಸ ಪ್ರಯೋಗ. ಚಿತ್ರದಲ್ಲಿ ಕ್ಯಾಮರಾ, ಸಂಕಲನ ಸೇರಿದಂತೆ ತಂತ್ರಜ್ಞಾನ ವರ್ಗವಂತೂ ಸಾಕಷ್ಟು ಶ್ರಮಪಟ್ಟಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News