×
Ad

ಸಿಂಧು, ಪ್ರಣಯ್ ಶುಭಾರಂಭ

Update: 2017-03-09 00:17 IST

 ಲಂಡನ್, ಮಾ.8: ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಬುಧವಾರ ಇಲ್ಲಿ ಆರಂಭವಾಗಿದ್ದು, ಮೊದಲ ಸುತ್ತಿನ ಪಂದ್ಯದಲ್ಲಿ ಪಿ.ವಿ. ಸಿಂಧು ಹಾಗೂ ಎಚ್‌ಎಸ್ ಪ್ರಣಯ್ ಜಯ ಸಾಧಿಸಿದ್ದಾರೆ.

ಆರನೆ ಶ್ರೇಯಾಂಕಿತೆ ಸಿಂಧು ಕೇವಲ 29 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಮೆಟ್ಟೆ ಪೌಲ್ಸೆನ್‌ರನ್ನು 21-10, 21-11 ಗೇಮ್‌ಗಳ ಅಂತರದಲ್ಲಿ ಮಣಿಸಿದರು. ಸಿಂಧು ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯದ ದಿನಾರ ಆಸ್ಟಿನ್‌ರನ್ನು ಎದುರಿಸಲಿದ್ದಾರೆ.

ಒಂದು ಗಂಟೆ, 22 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಚೀನಾದ ಕ್ವಿಯಾವೊ ಬಿನ್‌ರನ್ನು 17-21, 22-20, 21-19 ಗೇಮ್‌ಗಳ ಅಂತರದಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News