ಮಂಗಳೂರು: ನೂತನ ಮೇಯರ್ ಆಗಿ ಕವಿತಾ ಸನಿಲ್ ಆಯ್ಕೆ
ಮಂಗಳೂರು, ಮಾ.9: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಹಾನಗರ ಪಾಲಿಕೆಯ 19ನೆ ಅವಧಿಗೆ ನೂತನ ಮೇಯರ್ ಆಗಿ ಪಚ್ಚನಾಡಿ ವಾರ್ಡ್‍ನ ಸದಸ್ಯೆ ಕವಿತಾ ಸನಿಲ್ ಚುನಾಯಿಸಲ್ಪಟ್ಟಿದ್ದಾರೆ.
ಇಂದು ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 38 ಮತಗಳನ್ನು ಪಡೆಯುವ ಮೂಲಕ ನೂತನ ಮೇಯರ್ ಆಗಿ ಆಯ್ಕೆಗೊಂಡರು.
ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಯಂತಿ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆ ನಡೆಯಿತು. ದೇರೆಬೈಲ್ ಉತ್ತರ ವಾರ್ಡ್ ನ ರಜನೀಶ್ ಉಪ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾದರು.
ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ ಡಿಸೋಜಾ, ಶಾಸಕರಾದ ಜೆ.ಆರ. ಲೋಬೋ, ಮೊಯ್ದಿನ ಬಾವಾ ಉಪಸ್ಥಿತರಿದ್ದು ಕವಿತಾ ಸನಿಲ್ ಪರ ಮತ ಚಲಾಯಿಸಿದರು.
ಜೆಡಿಎಸ್ ಇಬ್ಬರು, ಸಿಪಿಎಂ, ಎಸ್‍ಡಿಪಿಐ ಹಾಗೂ ಪಕ್ಷೇತರ ತಲಾ ಒಬ್ಬ ಸದಸ್ಯರು ತಟಸ್ಥರಾಗಿದ್ದರು.ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ, 20, ಜೆಡಿಎಸ್ 2 ಹಾಗೂ ಸಿಪಿಎಂ, ಎಸ್‍ಡಿಪಿಐ ಹಾಗೂ ಪಕ್ಷೇತರ ತಲಾ 1 ಸ್ಥಾನವನನ್ನು ಹೊಂದಿದೆ.