ಕುಮಾರ್ ಬಂಗಾರಪ್ಪ ಪಕ್ಷ ತೊರೆದರೆ ಕಾಂಗ್ರೆಸ್ ಗೆ ಹಿನ್ನಡೆ ಆಗಲ್ಲ: ಕಾಗೋಡು ತಿಮ್ಮಪ್ಪ
Update: 2017-03-09 13:30 IST
ಮಂಗಳೂರು, ಮಾ.9: ಕುಮಾರ್ ಬಂಗಾರಪ್ಪ ಪಕ್ಷ ತೊರೆದರೆ ಕಾಂಗ್ರೆಸ್ ಗೆ ಯಾವುದೇ ಹಿನ್ನಡೆ ಆಗುವುದಿಲ್ಲ ಎಂದು ಹೇಳಿದರು.
ಇಂದು ಮಂಗಳೂರಿಗೆ ಆಗಮಿಸಿದ ಕಂದಾಯ ಸಚಿವ ಕಾಗೋಡು, ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕಾಂಗ್ರೆಸ್ ನಲ್ಲಿ ಅನೇಕ ಅನೇಕ ನಾಯಕರು ಇದ್ದಾರೆ. ಪಕ್ಷ ಸಿದ್ಧಾಂತದ ಆಧಾರದಲ್ಲಿ ರಾಜಕಾರಣ ಮಾಡಬೇಕು. ಅಲ್ಲದೆ ಇಲ್ಲಿ ಸಂತೆ ವ್ಯಾಪಾರ ಮಾಡಲು ಸಾಧ್ಯವಿಲ್ಲ ಎಂದರು. ತಂದೆ ತಾಯಿಯನ್ನು ಹೊರಹಾಕಿದ್ದ ಎಂದು ಅವರಪ್ಪನೇ ಹೇಳಿದ್ದ ಎಂದು ಹೇಳಿದರು.
ಎಸ್.ಎಂ. ಕೃಷ್ಣ ವಿಚಾರವಾಗಿ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಹಳಬರು ಎಲ್ಲ ಅಧಿಕಾರಗಳನ್ನು ಅನುಭವಿಸಿದ ನಂತರ ಈಗ ಅದು ಕೊಳೆತು ಹೋಯಿತಾ? ಎಂದು ವ್ಯಂಗ್ಯವಾಡಿದರು.