ರಮಾನಾಥ ರೈಗೆ ಚಿರಋಣಿ ಎಂದ ಮೇಯರ್ ಕವಿತಾ!
Update: 2017-03-09 15:34 IST
ಮಂಗಳೂರು, ಮಾ.9: ಮೇಯರ್ ಸ್ಥಾನಕ್ಕೆ ತಾನು ಆಯ್ಕೆಯಾಗುವಲ್ಲಿ ತಾನು ನಂಬಿರುವ ದೈವ ದೇವರುಗಳ ಅನುಗ್ರಹದ ಜತೆ ಪಕ್ಷದ ಹಿರಿಯ ನಾಯಕರು, vಅದರಲ್ಲೂ ಮುಖ್ಯವಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಅವರಿಗೆ ತಾನು ಚಿರಋಣಿ ಎಂದು ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಕವಿತಾ ಸನಿಲ್ ಕೃತಜ್ಞತೆ ಸಲ್ಲಿಸಿದರು.
ಪಕ್ಷದ 35 ಸದಸ್ಯರೂ ತನ್ನನ್ನು ಬೆಂಬಲಿಸಿದ ಕಾರಣ ತಾನು ಮೇಯರ್ ಸ್ಥಾನಕ್ಕೇರಲು ಸಾಧ್ಯವಾಗಿದ್ದು, ತನ್ನ ಅಧಿಕಾರಾವಧಿಯಲ್ಲಿ ಪಕ್ಷದ ಎಲ್ಲಾ ಸದಸ್ಯರ ಜತೆ ವಿಪಕ್ಷದ ಸದಸ್ಯರೆಲ್ಲರನ್ನೂ ಜತೆಗೂಡಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಕವಿತಾ ಸನಿಲ್ ನುಡಿದರು.