ಮಂಗಳೂರು: ಎ.ಜೆ. ಆಸ್ಪತ್ರೆಯಲ್ಲಿ ವಿಶ್ವಕಿಡ್ನಿ ದಿನಾಚರಣೆ,
ಮಂಗಳೂರು, ಮಾ. 9:ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದ ವತಿಯಿಂದ ಇಂದು ವಿಶ್ವಕಿಡ್ನಿ ದಿನಾಚರಣೆಯ ಪ್ರಯುಕ್ತ ಮೂತ್ರಪಿಂಡ ಜಾಗೃತಿ ಕಾರ್ಯಕ್ರಮವನ್ನು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿತ್ತು.
ಎ. ಜೆ. ಇನ್ಸ್ಟಿಟ್ಯೂಟ್ಆಫ್ ಹೆಲೈಡ್ ಸಾಯನ್ಸ್ ವಿದ್ಯಾರ್ಥಿಗಳು ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಆಸ್ಪತ್ರೆಯ ಸಿಬ್ಬಂದಿ, ರೋಗಿಯ ಸಂಬಂಧಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮೂತ್ರಪಿಂಡ ತಜ್ಞರಾದ ಡಾ. ರಾಘವೇಂದ್ರ ನಾಯಕ್ ಮಾತನಾಡಿ, ಮಾನವ ಜೀವನದಲ್ಲಿ ಅತ್ಯಾವಶ್ಯಕ ಅಂಗವಾಗಿರುವ ಮೂತ್ರಪಿಂಡವನ್ನು ಆದಷ್ಟೂ ಫಿಟ್ ಮತ್ತು ಸಕ್ರಿಯವಾಗಿ ಇರಿಸಿಕೊಳ್ಳಬೇಕು. ಪ್ರತೀ ದಿನವೂ ಅದರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು. ಆರೋಗ್ಯವಂತರ ಮೂತ್ರಪಿಂಡವು ಸರಿಯಾಗಿ ಕೆಲಸ ಮಾಡಲು ದ್ರವ ಪದಾರ್ಥವನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು. ಮೂತ್ರಪಿಂಡದ ಆರೋಗ್ಯ ಕಾಪಾಡಲು ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಬೇಕು, ರಕ್ತದೊತ್ತಡವನ್ನು ನಿಯಂತ್ರಿಸಬೇಕು, ಆರೋಗ್ಯಕರ ಆಹಾರವನ್ನು ಸೇವಿಸಬೇಕು, ಧೂಮಪಾನವನ್ನು ತ್ಯಜಿಸಬೇಕು, ಮೂತ್ರಪಿಂಡ ಪರಿಶೀಲನಾ ತಪಾಸಣೆಗಳನ್ನು ನಡೆಸುತ್ತಿರಬೇಕು ಎಂದು ಸಲಹೆ ನೀಡಿದರು.
ಎ. ಜೆ. ಇನ್ಸ್ಟಿಟ್ಯೂಟ್ಆಫ್ ಹೆಲೈಡ್ ಸಾಯನ್ಸ್‌ಸ್‌ನ ವಿದ್ಯಾರ್ಥಿಗಳು ಮೈಮ್ ಶೋ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮಾಹಿತಿ ಕೈಪಿಡಿಗಳನ್ನು ನೀಡಲಾಯಿತು.
ಕಾರ್ಯಕ್ರಮವನ್ನು ನರ್ಸಿಂಗ್ ವಿಭಾಗದ ಲವಿಟ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.