×
Ad

'ಸಿಲಿಕಾನ್‌' ಮೊಬೈಲ್ ಶಾಪ್ ಶುಭಾರಂಭ

Update: 2017-03-09 19:43 IST

ಮಂಗಳೂರು, ಮಾ.9: ನಗರದ ಬಂದರ್ ಮಿಶನ್ ಸ್ಟ್ರೀಟ್‌ನ ಸಿಟಿ ವಾಕ್ ಕಮರ್ಶಿಯಲ್ ಕಾಂಪ್ಲೆಕ್ಸ್‌ನಲ್ಲಿ 'ಇ.ಕೆ.ಎಸ್. ಸಿಲಿಕಾನ್ ಮೊಬೈಲ್ ಸೇಲ್ಸ್ ಆ್ಯಂಡ್ ಸರ್ವಿಸ್‌' ಶಾಪ್ ಗುರುವಾರ ಶುಭಾರಂಭಗೊಂಡಿತು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಜಿಪಂ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ ತುಂಬೆ, ಬಂಟ್ವಾಳ ಎಪಿಎಂಸಿ ಸದಸ್ಯ ಅಬ್ದುಲ್ ಲತೀಫ್ ವಗ್ಗ, ಅಕ್ಬರ್ ಚಿಕ್ಕಮಗಳೂರು, ಬಿ.ಪಿ. ಆಸೀಫ್ ರೋಶನ್, ಇಸಾಕ್ ವಗ್ಗ, ಝಕರಿಯಾ ಎಚ್‌ಬಿ ಕಾರ್ಸ್‌, ನವಾಝ್ ಟಾಪ್ ಇನ್ ಟಾಪ್, ವಿವೋ ಮೊಬೈಲ್‌ನ ಪ್ರಧಾನ ವ್ಯವಸ್ಥಾಪಕರಾದ ಪೃಥ್ವಿ, ಲುಕಾಸ್, ಜಿಯೋನಿ ಮೊಬೈಲ್ಸ್‌ನ ವಲಯ ಮಾರಾಟ ವ್ಯವಸ್ಥಾಪಕ ಬಸವರಾಜ್, ಒಪ್ಪೊ ಮೊಬೈಲ್ಸ್‌ನ ವಲಯ ಮಾರಾಟ ವ್ಯವಸ್ಥಾಪಕ ಮೈಕೆಲ್ ಶುಭ ಹಾರೈಸಿದರು.

ಮಳಿಗೆಯ ಶುಭಾರಂಭದ ಪ್ರಯುಕ್ತ ಎಲ್ಲ ಬ್ರಾಂಡ್‌ನ ಮೊಬೈಲ್‌ಗಳ ವಿನಿಮಯ ಕೊಡುಗೆಗಳನ್ನು 'ಸಿಲಿಕಾನ್‌' ನೀಡಲಿದೆ. ಪ್ರತೀ 10 ಸಾವಿರ ರೂ. ಬೆಲೆಯ ಮೊಬೈಲ್ ಖರೀದಿಗೆ ಲಕ್ಕೀ ಕೂಪನ್ ನೀಡಲಾಗುವುದು.

ಇದರ 'ಡ್ರಾ' ಪ್ರತೀ ದಿನ ನಡೆಯಲಿದೆ. ಪ್ರತೀ 15 ಸಾವಿರ ರೂ. ಬೆಲೆಯ ಮೊಬೈಲ್ ಖರೀದಿಗೆ 25 ಸಾವಿರ ರೂ.ಮೌಲ್ಯದ ಲಕ್ಕೀ ಕೂಪನ್ ದೊರೆಯಲಿದೆ. ಇದರ 'ಡ್ರಾ' ತಿಂಗಳಿಗೊಮ್ಮೆ ನಡೆಯಲಿದೆ.

ಈ ಕೊಡುಗೆ ಮೇ 31ರವರೆಗೆ ಇರುತ್ತದೆ ಎಂದು 'ಸಿಲಿಕಾನ್‌' ಮೊಬೈಲ್ ಶಾಪ್‌ನ ಮಾಲಕ ಮುಹಮ್ಮದ್ ಅಝರುದ್ದೀನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News