ಉಡುಪಿ: ಅಮೆರಿಕಾ ಜನಾಂಗೀಯ ಹಿಂಸೆ ವಿರೋಧಿಸಿ ಪ್ರತಿಭಟನೆ
ಉಡುಪಿ, ಮಾ.9: ಅಮೆರಿಕಾದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸೆ ಯನ್ನು ವಿರೋಧಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಲಾಯಿತು.
ಎಸ್‌ಐಓ ಮುಖಂಡ ಯಾಸೀನ್ ಕೋಡಿಬೆಂಗ್ರೆ ಮಾತನಾಡಿ, ಅಮೆರಿಕಾ ದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಚುನಾಯಿತರಾದ ದಿನದಿಂದ ಜನಾಂಗೀಯ ಧ್ವೇಷ ಮಿತಿಮೀರಿದ್ದು, ಅಲ್ಲಿ ವಾಸಿಸುತ್ತಿರುವ ಇತರ ದೇಶ ಗಳ ನಿವಾಸಿಗಳಿಗೆ ಆತಂಕ ಉಂಟಾಗಿದೆ. ಇದೀಗ ಈ ದಾಳಿ ಭಾರತೀಯರ ಮೇಲೂ ಮುಂದುವರೆದಿದ್ದು, ಈಗಾಗಲೇ ಇಬ್ಬರು ಅಮಾಯಕ ಭಾರತೀ ಯರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದರು.
ಅಮೆರಿಕಾದಲ್ಲಿ ವಾಸಿಸುವ ಭಾರತೀಯ ರಕ್ಷಣೆಗಾಗಿ ಕೇಂದ್ರ ಸರಕಾರ ತನ್ನ ವೌನ ಮುರಿದು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಭಾರತೀಯರ ರಕ್ಷಣೆಗೆ ಸೂಕ್ತ ನಿಯಮಗಳನ್ನು ರೂಪಿಸುವಂತೆ ಅಮೆರಿಕಾ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಜನಾಂಗೀಯ ಧ್ವೇಷ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಮೆರಿಕಾವನ್ನು ಭಾರತ ಸರಕಾರ ಒತ್ತಾ ಯಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್‌ಐಓ ಜಿಲ್ಲಾಧ್ಯಕ್ಷ ಜಿ.ಶುಐಬ್ ಮಲ್ಪೆ, ಕಾರ್ಯ ದರ್ಶಿ ಎಂ.ಬಿಲಾಲ್, ಪ್ರಮುಖರಾದ ಶಾರೂಕ್ ತೀರ್ಥಹಳ್ಳಿ, ಆವುಸಾಫ್ ಮಲ್ಪೆ, ಆಫ್ವಾನ್ ಹೂಡೆ, ಸಲಾವುದ್ದೀನ್ ಹೂಡೆ ಮೊದಲಾದವರು ಉಪ ಸ್ಥಿತರಿದ್ದರು.