ಪುತ್ತೂರು: ಕಾಫಿ ಹುಡಿ ಸಾಗಾಟದ ಕಂಟೈನರ್ ಪಲ್ಟಿ
Update: 2017-03-09 20:13 IST
ಪುತ್ತೂರು, ಮಾ.9: ಮಂಗಳೂರಿನಿಂದ ಮಡಿಕೇರಿಗೆ ಕಾಫಿ ಹುಡಿ ಸಾಗಾಟ ಮಾಡುತ್ತಿದ್ದ ಕಂಟೈನರ್ ಲಾರಿ ಪುತ್ತೂರು ಬೈಪಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಬೈಪಾಸ್‌ನ ಉರ್ಲಾಂಡಿ ಎಂಬಲ್ಲಿ ಟ್ಯಾಂಕರ್ ಪಲ್ಟಿಯಾಗಿದ್ದು, ಚಾಲಕ ಪುತ್ತೂರು ತಾಲೂಕಿನ ಇರ್ದೆ ಬೆಟ್ಟಂಪಾಡಿ ನಿವಾಸಿ ಅರುಣ್ ಕುಮಾಋ(33) ಗಾಯಗೊಂಡಿದ್ದಾರೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.