×
Ad

ಮಂಗಳೂರು: ಹಿಕ್ಮಾಹ್‌ ಅಕಾಡಮಿಯಿಂದ ವಾರ್ಷಿಕೋತ್ಸವ

Update: 2017-03-09 22:58 IST

ಮಂಗಳೂರು, ಮಾ. 9: ನಗರದ 'ಹಿಕ್ಮಾಹ್‌' ಇಂಟರ್‌ನ್ಯಾಷನಲ್ ಅಕಾಡಮಿಯ ವಾರ್ಷಿಕೋತ್ಸವ ಇಂದು ನಗರದ ಐಎಂಎ ಸಭಾಂಗಣದಲ್ಲಿ ನಡೆಯಿತು.

ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು. ಇಸ್ಲಾಮಿಕ್ ಗೀತೆಗಳು, ಖಿರಾತ್ ವಾಚನ ಸಹಿತ ಇಸ್ಲಾಮಿಗೆ ಸಂಬಂಧಪಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆದವು.

 ಅಲ್ ಅಸರ್ ಫೌಂಡೇಶನ್ ಬೋಪಾಲ್ ಇದರ ಸಿಇಓ ಅಥರ್ ಖಾನ್ ಅವರು ಇಸ್ಲಾಮಿ ಶಾಲೆಗಳ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಅಕಾಡಮಿಯ ಟ್ರಸ್ಟಿ ಸೈಯದ್ ಹಬೀಬ್ ಪಾಶ ಬೆಂಗಳೂರು ಇವರು ಹೆತ್ತವರು ಮತ್ತು ಮಕ್ಕಳ ಸಂಬಂಧ ಹೇಗಿರಬೇಕು ಎಂಬುದರ ಬಗ್ಗೆ ಪೋಷಕರಿಗೆ ಕಿವಿಮಾತು ಹೇಳಿದರು. ಅಕಾಡಮಿಯ ಮುಖ್ಯ ಶಿಕ್ಷಕಿ ಪ್ರೀತಿ ಶೆಣೈ ಮಾತನಾಡಿ, ಎಳೆಯ ಮಕ್ಕಳಿಗೆ ನೀಡಲಾಗುವ ಮೊಂಟೆಸ್ಸರಿ ವಿದ್ಯಾಭ್ಯಾಸದ ಬಗ್ಗೆ ಬೆಳಕು ಚೆಲ್ಲಿದರು.

ಅಡಾಮಿಯ ಸಿಇಓ ಸೈಫ್ ಸುಲ್ತಾನ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಡಾಡಮಿ ವತಿಯಿಂದ ಈಗಾಗಲೇ ನಾಲ್ಕು ಎಕರೆ ಜಮೀನನ್ನು ಗುರುತಿಸಲಾಗಿದ್ದು, ಭವಿಷ್ಯದಲ್ಲಿ ಅಕಾಡಮಿ ಕೈಗೊಳ್ಳುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಅಕಾಡಮಿಯ ಪ್ರಾಂಶುಪಾಲೆ ಲುಬೈನಾ ಸೈಫ್ ಅವರು ವಾರ್ಷಿಕ ವರದಿ ವಾಚಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಕ್ಮಾಹ್ ಇಂಟರ್‌ನ್ಯಾಷನಲ್ ಅಕಾಡಮಿಯ ಅಧ್ಯಕ್ಷ ಆರ್ಕಿಟೆಕ್ಟ್ ಮುಹಮ್ಮದ್ ನಿಸಾರ್, ಟ್ರಸ್ಟಿಗಳಾದ ನೌಶಾದ್ ಎ.ಕೆ., ನಾಝಿಮ್ ಎ.ಕೆ., ಎಸ್.ಎಂ.ಫಾರೂಕ್, ಮುಹಮ್ಮದ್ ರಿಝ್ವಿನ್, ಸಾಜಿಕ್ ಎ.ಕೆ. ಉಪಸ್ಥಿತರಿದ್ದರು.

ಶಾಲೆಯ ವಿದ್ಯಾರ್ಥಿ ಶಹಾನ್ ಅಹ್ಮದ್ ಎ.ಕೆ., ಆಯಿಶಾ ಫಾತಿಮಾ ಮತ್ತು ಸಾರಾ ಸೈಫ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News