×
Ad

ಎ.ಜೆ. ಆಸ್ಪತ್ರೆ: ಮಾ.16-17ರಂದು ಭುಜದ ನೋವಿನ ಉಚಿತ ತಪಾಸಣಾ ಶಿಬಿರ

Update: 2017-03-10 11:52 IST

ಮಂಗಳೂರು, ಮಾ.10: ಎ.ಜೆ. ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಾರ್ಚ್ 16 ಮತ್ತು 17ರಂದು ಉಚಿತ ಭುಜದ ನೋವಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಎರಡು ದಿನಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಆಸ್ಪತ್ರೆಯ ನೆಲ ಅಂತಸ್ತು ಹೊರರೋಗಿ ವಿಭಾಗದಲ್ಲಿ ನಡೆಯುವ ತಪಾಸಣಾ ಶಿಬಿರದಲ್ಲಿ ಅರ್ತ್ರೋಸ್ಕೋಪಿ ಶಸ್ತ್ರಚಿಕಿತ್ಸಕ ಡಾ.ಸುದರ್ಶನ್ ಭಂಡಾರಿ ಸಂದರ್ಶನಕ್ಕೆ ಲಭ್ಯರಿರುವರು.

ಡಾ.ಸುದರ್ಶನ್ ಭಂಡಾರಿ ಮೊಣಕಾಲು ಮತ್ತು ಭುಜದ ಅರ್ತ್ರೋಸ್ಕೋಪಿ ಶಸ್ತ್ರಚಿಕಿತ್ಸಾ ತಜ್ಞರಾಗಿದ್ದಾರೆ. ಅವರಿಗೆ ಮೊಣಕಾಲು ಮತ್ತು ಭುಜದ ಅರ್ತ್ರೋಸ್ಕೋಪಿ ಶಸ್ತ್ರಚಿಕಿತ್ಸೆಯಲ್ಲಿ 22 ವರ್ಷಗಳ ಅನುಭವವಿದ್ದು, 6,000ಕ್ಕೂ ಹೆಚ್ಚಿನ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ.

ಈ ಶಿಬಿರದಲ್ಲಿ ಸಾಮಾನ್ಯ ಭುಜದ ಕಾಯಿಲೆಗಳು ಮತ್ತು ಗಾಯಗಳನ್ನು ಪ್ರಾಥಮಿಕವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಪದೇ ಪದೇ ಭುಜದ ಕೀಲು ಜಾರುವ ಸಮಸ್ಯೆ, ಮೃದ್ವಸ್ಥಿಯ ಗಾಯ, ಪದೇ ಪದೇ ಕಾಣುವ ಭುಜದ ನೋವು, ಜಡಗಟ್ಟಿದ ಭುಜ ಮೊದಲಾದ ಸಮಸ್ಯೆಗಳುಳ್ಳವರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು.

ಶಿಬಿರದ ವಿಶೇಷತೆಗಳು:
* ನೋಂದಣಿ, ವೈದ್ಯರೊಂದಿಗೆ ಸಲಹೆ ಮತ್ತು ಸೂಚನೆ ಸಂಪೂರ್ಣ ಉಚಿತ.
* ಎಂ.ಆರ್.ಐ. ಪರೀಕ್ಷೆ ಮತ್ತು ಕೀಹೋಲ್ ಶಸ್ತ್ರಚಿಕಿತ್ಸೆ ದರದಲ್ಲಿ ರಿಯಾಯಿತಿ.
ಕೀಹೋಲ್ ಶಸ್ತ್ರಚಿಕಿತ್ಸೆಯ ಕಾರಣ ಗಾಯದ ಗುರುತು ಉಳಿಯುವುದಿಲ್ಲ, ಅಲ್ಪಾವಧಿ ಆಸ್ಪತ್ರೆ ವಾಸ ಸಾಕಾಗುತ್ತದೆ. ಮತ್ತು ಕಡಿಮೆ ತೊಡಕುಗಳು ಕಾಣಿಸಿಕೊಳ್ಳುತ್ತವೆ.

ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ದೂ.ಸಂ.: 0824-6613252 ಅಥವಾ ಮೊ.ಸಂ.: 8494890600, ‍ಇ-ಮೇಲ್: marketing@ajhospital.in ಅನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News