×
Ad

ಪೊಣ್ಯಂ ಬಾಂಬೆಸೆತ ಪ್ರಕರಣದಲ್ಲಿ ಓರ್ವ ಆರೆಸ್ಸೆಸ್ ಕಾರ್ಯಕರ್ತನ ಬಂಧನ

Update: 2017-03-10 14:15 IST

ತಲಶ್ಶೇರಿ,ಮಾ. 10: ಪೊಣ್ಯಂ ನಾಯನಾರ್ ರಸ್ತೆಯಲ್ಲಿ ಬಾಂಬೆಸೆತ  ಪ್ರಕರಣದಲ್ಲಿ  ಆರೆಸ್ಸೆಸ್ ಕಾರ್ಯಕರ್ತನನ್ನು ಕದಿರೂರ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಎರಿಞಾಲಿ ಕುಡಕ್ಕಳಂ ಪಾಲಾಪ್ಪರಂಬ್ ಹೌಸ್‌ನ ಪ್ರಭೇಶ್(25) ಎಂದು ಗುರುತಿಸಲಾಗಿದೆ.

ಬುಧವಾರ ಸಂಜೆ 5:45ಕ್ಕೆ ನಾಯನಾರ್ ರಸ್ತೆಯಲ್ಲಿ ಬಾಂಬೆಸೆತ ನಡೆದಿತ್ತು. ಪ್ರಭೇಶ್ ಮತ್ತು ಇತರ ನಾಲ್ವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಬಾಂಬೆಸತದಿಂದ ಸಿಪಿಎಂ ಮಲಾಲ್ ಶಾಖೆಯ ಸದಸ್ಯ ಆಟೋಚಾಲಕ ರಿನೀಶ್, ಅವರ ಸಂಬಂಧಿಕರಾದ ಸುರೇಂದ್ರನ್ ಎರ್ನಾಕುಲಂನ ಬ್ಲಾಕ್ ಪಂಚಾಯತ್ ಅಧಿಕಾರಿ ಶ್ರೀಕುಮಾರ್, ವಯನಾಡ್‌ನ ವೆಲಿಯಪರಂಬತ್ ಅನಿಲ್, ಸ್ಟೇಶನರಿ ವ್ಯಾಪಾರಿ ರಾಮ ಚಂದ್ರನ್, ಬಸ್‌ಸ್ಟಾಂಡ್‌ನಲ್ಲಿದ್ದ ರವೀಂದ್ರನ್, ಟಯರ್ ರಿಸೋಲ್ ಮಾಡುವ ರಾಜನ್ ಮುಂತಾದವರು ಗಾಯಗೊಂಡಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News