×
Ad

"ಪ್ರಕರಣದ ತನಿಖೆಯಾಗಲಿ ಎಂದು ನಾನು ಹೇಳಿದ್ದನ್ನು ಚಾನಲ್‌ಗಳು ವರದಿ ಮಾಡಿಲ್ಲ”

Update: 2017-03-10 15:23 IST

ಕಾನ್ಪುರ, ಮಾ.10: ಎಟಿಎಸ್  ಕಾರ್ಯಾಚರಣೆಯಲ್ಲಿ ಗುಂಡಿಗೆ ಬಲಿಯಾದ ಶಂಕಿತ ಭಯೋತ್ಪಾದಕ ಸೈಫುಲ್ಲಾ ಪ್ರಕರಣದ ನ್ಯಾಯಾಂಗ ತನಿಖೆಯಾಗಲಿ ಎಂದು ಆಗ್ರಹಿಸಿದ್ದನ್ನು ಚಾನಲ್‌ಗಳು ವರದಿ ಮಾಡಿಲ್ಲ ಎಂದು ಸೈಫುಲ್ಲಾ ತಂದೆ ಸರ್ತಾಜ್‌ ಅಹ್ಮದ್‌ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮ ವರದಿ ಮತ್ತು ಎಟಿಎಸ್‌ ಮಾಹಿತಿಯಂತೆ ಸರ್ತಾಜ್‌ ಅಹ್ಮದ್‌ ತನ್ನ ಮಗನ ಮೃತದೇಹವನ್ನು ಸ್ವೀಕರಿಸುವುದಿಲ್ಲ  ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು.
"ಸೈಫುಲ್ಲಾ ಮನೆಯ ಕೊಠಡಿಯೊಂದರಲ್ಲಿ ಅಡಗಿಕೊಂಡು ಪೊಲೀಸರಿಗೆ ಗುಂಡು ಹಾರಿಸಿದ್ದರು”  ಎನ್‌ ಕೌಂಟರ‍್ ಬಳಿಕ  ಎಟಿಎಸ್‌ ಅಧಿಕಾರಿಯೊಬ್ಬರು ನನಗೆ ಮಾಹಿತಿ ನೀಡಿದ್ದರು. 
ಸೈಫುಲ್ಲಾ ಎನ್‌ಕೌಂಟರ‍್ ಗೆ ಬಲಿಯಾದ ಬಳಿಕ ಚಾನೆಲ್‌ ಗಳ ಪ್ರತಿನಿಧಿಗಳು ನನ್ನ ಮನೆಯ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ಆಗ ನಾನು ಚಾನಲ್‌ಗೆ ನೀಡಿದ ಹೇಳಿಕೆಯ ಪೂರ್ಣ ವಿವರ ಪ್ರಸಾರಗೊಂಡಿಲ್ಲ. " ಮಗನನ್ನು ಎನ್‌ಕೌಂಟರ‍್ ನಡೆಸಿದ ಪ್ರಕರಣ ಸಮಗ್ರವಾಗಿ ತನಿಖೆಯಾಗಬೇಕು. ನನಗೆ ಘಟನೆಯ ವಾಸ್ತವ ವಿಚಾರ ಅರಿವಾಗಬೇಕು. ಅದು ಬಿಟ್ಟು ಈ ಪ್ರಕರಣವನ್ನು ಅಲ್ಲಿಗೆ ಬಿಡಲು ನಾನು ತಯಾರಿಲ್ಲ” ಎಂದು ಸರ್ತಾಜ್‌ ಅಹ್ಮದ್‌ ಹೇಳಿದ್ದಾರೆ.
ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿಕೊಂಡಿರುವ  ಅಮಾಯಕ ಯುವಕರ ಪರ ಹೋರಾಟ ನಡೆಸುತ್ತಿರುವ "ರಿಹಾಯ್ ಮಂಚ್‌” ಸಂಘಟನೆಯ ಸದಸ್ಯರು ತಮ್ಮನ್ನು ಭೇಟಿಯಾದ ಬಳಿಕ ಸರ್ತಾಜ್‌ ಅಹ್ಮದ್‌  ಹೇಳಿಕೆ ನೀಡಿದ್ದಾರೆ. 
" ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ನಾನು ಚಾನಲ್‌ಗಳಿಗೆ  ನೀಡಿದ ಹೇಳಿಕೆಯನ್ನು ಯಾಕೆ ವರದಿ ಮಾಡಿಲ್ಲ ಎನ್ನುವ ಬಗ್ಗೆಯೂ ತನಿಖೆಯಾಬೇಕು ಎಂದು ಅಭಿಪ್ರಾಯಪಟ್ಟಿರುವ ಸರ್ತಾಜ್‌ ಅಹ್ಮದ್‌ "ನನ್ನ ಮಗ ಮನೆಯಿಂದ ಹೊರಟು ಹೋಗಿ ಎರಡೂವರೆ  ತಿಂಗಳು ಕಳೆದಿತ್ತು. ಆತ ಕಾನ್ಪುರದ ಹೊರವಲಯದ ಚರ್ಮ ಹದ ಮಾಡುವ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಚಾರ ಗೊತ್ತಿತ್ತು. ಆದರೆ ಅವನ ಕೈಗೆ ಗನ್‌ ಹೇಗೆ ಬಂತು ಎನ್ನುವುದು ಗೊತ್ತಿಲ್ಲ ” ಎಂದು ಸರ್ತಾಜ್‌ ಅಹ್ಮದ್‌ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News