ಕನ್ಯಾನ: 450 ಟನ್ ಅಕ್ರಮ ಮರಳು ದಾಸ್ತಾನು ವಶ
Update: 2017-03-10 15:31 IST
ಮಂಗಳೂರು, ಮಾ.10: ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಹಭಾಗಿತ್ವದಲ್ಲಿ ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕನ್ಯಾನ ಗ್ರಾಮದಲ್ಲಿ 450 ಟನ್ ಅಕ್ರಮ ಮರಳು ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಮತ್ತು ತಂಡವು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಿಬ್ಬಂದಿಯು ಶಿರಂಕಲ್ಲು ಎಂಬಲ್ಲಿ ಈ ಮರಳನ್ನು ವಶಪಡಿಸಿಕೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ತಿಳಿಸಿದ್ದಾರೆ.