ಸಂಗೀತಕ್ಕೆ ಧರ್ಮದ ಲೇಪ ಬೇಡ: ಬಾಲಿವುಡ್ ಸಿಂಗರ್ ಜೋಡಿ ಸಲೀಂ ಸುಲೇಮಾನ್
Update: 2017-03-10 18:02 IST
ಮಂಗಳೂರು, ಮಾ,10: ರಿಯಾಲಿಟಿ ಶೋ ಸುಹಾನ ಸಯ್ಯದ್ ಅವರ ಹಾಡಿನ ವಿವಾದದ ಬಗ್ಗೆ ಖ್ಯಾತ ಬಾಲಿವುಡ್ ಸಿಂಗರ್ ಜೋಡಿ ಸಲೀಂ ಸುಲೇಮಾನ್ ಹೇಳಿಕೆ ನೀಡಿದ್ದಾರೆ.
ಸಂಗೀತಕ್ಕೆ ಧರ್ಮದ ಲೇಪ ಬೇಡ. ಸಂಗೀತಕ್ಕೆ ಧರ್ಮದ ಚೌಕಟ್ಟಿಲ್ಲ. ದೇವರ ನಾಮ ಹಾಡಿದ್ದಕ್ಕೆ ಆಕ್ಷೇಪ ಸರಿಯಲ್ಲ ಎಂದು ಹೇಳಿದ್ದಾರೆ.
ನಾವು ಕೂಡ ಭಜನ್, ಗಣೇಶ ಸ್ತುತಿ ಭಕ್ತಿಗೀತೆಗಳನ್ನು ಹಾಡಿದ್ದೇವೆ. ದೇವರ ನಾಮ ಹಾಡಿದರೆಂದು ವಿರೋಧಿಸುವುದು ತರವಲ್ಲ ಎಂದು ಮಂಗಳೂರಿನಲ್ಲಿ ಖ್ಯಾತ ಸಂಗೀತಗಾರ, ಸಂಗೀತ ನಿರ್ದೇಶಕ ಜೋಡಿ ಸಲೀಂ ಸುಲೇಮಾನ್ ಹೇಳಿಕೆ ನೀಡಿದ್ದಾರೆ.