ಮಂಗಳೂರು: ಮಾ.12ರಂದು 'ಇ-ಮೆನ್ ಎಕ್ಸ್ಲುಸಿವ್' ಮತ್ತು 'ಐಸ್ ಫ್ಯಾಕ್ಟರಿ' ಉದ್ಘಾಟನೆ
ಮಂಗಳೂರು, ಮಾ.10: ನಗರದ ಫಳ್ನೀರ್ ರಸ್ತೆಯ ಅಥೆನಾ ಆಸ್ಪತ್ರೆ ಕಾಂಪ್ಲೆಕ್ಸ್‌ನಲ್ಲಿ 'ಇ-ಮೆನ್ ಎಕ್ಸ್ಲುಸಿವ್' ಮತ್ತು 'ಐಸ್ ಫ್ಯಾಕ್ಟರಿ' ಯು ಮಾ.12ಂದು ಬೆಳಗ್ಗೆ 9:45ಕ್ಕೆ ಶುಭಾರಂಭಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕ ಜೆ.ಆರ್.ಲೋಬೊ, ಕ್ರೆಡೈ ರಾಜ್ಯ ಜತೆ ಕಾರ್ಯದರ್ಶಿ ಪುಷ್ಪರಾಜ ಜೈನ್, ಅಥೆನಾ ಆಸ್ಪತ್ರೆಯ ಅಧ್ಯಕ್ಷ ಹಾಗು ಆಡಳಿತ ನಿರ್ದೇಶಕ ಆರ್.ಎಸ್. ಶೆಟ್ಟಿಯಾನ್, ಯೂಸುಫ್ ಹಾಜಿ ಕೋಡಿಯಾಲ್‌ಬೈಲ್, ಶಾಲಿಮಾರ್ ಗ್ರೂಫ್‌ನ ಬಶೀರ್ ಅಹ್ಮದ್, ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ಮಾಲಕ ಅಬ್ದುರ್ರವೂಫ್ ಪುತ್ತಿಗೆ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಎಸ್‌ಕೆಎಸ್‌ಎಂ ಅಧ್ಯಕ್ಷ ಯು.ಎನ್. ಅಬ್ದುರ್ರಝಾಕ್, ಅಝಾದ್ ಹಾರ್ಡ್‌ವೇರ್‌ನ ಮನ್ಸೂರ್ ಅಹ್ಮದ್, ಟ್ಯಾಕ್ಸ್ ಕನ್ಸಲ್ಟಂಟ್ ಅಬ್ದುಲ್ ಖಾದರ್, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಅಬ್ದುಲ್ ರವೂಫ್ ಭಾಗವಹಿಸಲಿದ್ದಾರೆ.
ಮಾನ್ಯವರ್, ಬ್ಲಾಕ್‌ಬರೀಸ್, ಲೂಯಿಸ್ ಪಿಲಿಪ್ಪ್, ಇಂಡಿಯನ್ ಟೆರೈನ್, ಲೀ, ರೆಡಿ, ಕಿಲ್ಲರ್, ಜೆ. ಹ್ಯಾಂಪ್‌ಸ್ಟ್‌ಡ್, ಸಿನ್, ಮೋಂಟೆ ಕಾರ್ಲೊ, ಲೈವ್ ಇನ್, ಝಡ್ ತ್ರೀ, ರೊಡೈಕ್, ಮಾರ್ಕ್ ಅಂಡರ್‌ಸನ್, ಮುಫ್ತಿ, ಬೀವೀ, ಒಕ್ಸಂಬರ್ಗ್, ಜೋಕಿ, ರೇಝರ್, ಪರ್ಫ್ಯೂಮ್ಸ್ ಬ್ರಾಂಡ್‌ನ ಬಟ್ಟೆಬರೆಗಳು 'ಇ-ಮೆನ್ ಎಕ್ಸ್ಲುಸಿವ್' ನಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.