ಬಜ್ಪೆ: ಅಕ್ರಮ ಮರಳುಗಾರಿಕೆ, ಮೂರು ಟಿಪ್ಪರ್ ವಶ
Update: 2017-03-10 20:20 IST
ಮಂಗಳೂರು, ಮಾ.10: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿಯನ್ನು ಬಜ್ಪೆ ಪೊಲೀಸರು ಅಡ್ಡೂರು ಜಂಕ್ಷನ್ ಬಳಿ ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಬಜ್ಪೆಪೊಲೀಸ್ ಠಾಣಾ ಎಎಸ್ಸೈ ಧನರಾಜ್ ಶುಕ್ರವಾರ ಬೆಳಗ್ಗೆ ಸಿಬ್ಬಂದಿಯ ಜೊತೆ ಅಡ್ಡೂರು ಜಂಕ್ಷನ್ ಬಳಿ ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ಅಡ್ಡೂರು ಸೇತುವೆ ಕಡೆಯಿಂದ ಬರುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ನಿಲ್ಲಿಸಲು ಸೂಚಿಸಿದರು.
ಆದರೆ ಚಾಲಕರು 100 ಮೀ. ದೂರದಲ್ಲೇ ಟಿಪ್ಪರ್ ನಿಲ್ಲಿಸಿ ಪರಾರಿಯಾದರು ಎನ್ನಲಾಗಿದೆ.