ಟೆರೇಸ್ ನಲ್ಲಿ ಮಲಗಿದ್ದ ಎಂಬಿಎ ವಿದ್ಯಾರ್ಥಿ ಕೆಳಗೆ ಬಿದ್ದು ಮೃತ್ಯು
ಹೈದರಾಬಾದ್ , ಮಾ. 10 : ಇಲ್ಲಿನ ತರ್ನಾಕ ಎಂಬಲ್ಲಿ ಐದು ಮಹಡಿಯ ಅಪಾರ್ಟ್ ಮೆಂಟ್ ನ ಟೆರೇಸ್ ನಲ್ಲಿ ಸ್ನೇಹಿತರ ಜೊತೆ ಮಲಗಿದ್ದ ಎಂಬಿಎ ವಿದ್ಯಾರ್ಥಿಯೊಬ್ಬ ನಿದ್ರೆಯಲ್ಲೇ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.
" ಗೋಡೆಯಿಲ್ಲದ ಟೆರೇಸ್ ನಲ್ಲಿ ತನ್ನ ಸ್ನೇಹಿತರ ಜೊತೆ ಮೋಹಿತ್ ಅಗರ್ವಾಲ್ ಮಲಗಿ ನಿದ್ರೆ ಹೋಗಿದ್ದ. ಬೆಳಗ್ಗೆ 6 ಗಂಟೆ ಸುಮಾರಿಗೆ ನಿದ್ರೆಯಲ್ಲೇ ಆತ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ " ಎಂದು ಓಸ್ಮಾನಿಯ ವಿವಿ ಔಟ್ ಪೋಸ್ಟ್ ಇನ್ಸ್ ಪೆಕ್ಟರ್ ವಿ . ಅಶೋಕ್ ರೆಡ್ಡಿ ಹೇಳಿದ್ದಾರೆ.
ಮೃತ ಎಂಬಿಎ ವಿದ್ಯಾರ್ಥಿ ಮೋಹಿತ್ ಉತ್ತರ ಪ್ರದೇಶದ ರಾಯ್ ಬರೇಲಿಯವನು ಎಂದು ತಿಳಿದು ಬಂದಿದೆ. ಈತ ಕೆಳಗೆ ಬಿದ್ದು ಮೃತಪಟ್ಟಿದ್ದರೂ ಆತನ ಜೊತೆಗಿದ್ದ ಸ್ನೇಹಿತರು ವಿಷಯ ಗೊತ್ತಿಲ್ಲದೇ ನಿದ್ರೆ ಹೋಗಿದ್ದರು. ಕಟ್ಟಡದ ವಾಚ್ ಮ್ಯಾನ್ ಅವರನ್ನು ಎಬ್ಬಿಸಿ ವಿಷಯ ತಿಳಿಸಿದ್ದಾನೆ.
ಘಟನೆಯಲ್ಲಿ ಯಾವುದೇ ಸಂಶಯಾಸ್ಪದ ವಿಷಯಗಳು ಕಂಡು ಬಂದಿಲ್ಲ ಎಂದು ಇನ್ಸ್ ಪೆಕ್ಟರ್ ರೆಡ್ಡಿ ಹೇಳಿದ್ದಾರೆ.